ಬೆಂಗಳೂರು: ಸ್ಯಾಂಡಲ್‍ವುಡ್ ನಟ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೇಮ್ಸ್ ಚಿತ್ರದ ಶೂಟಿಂಗ್‍ಗಾಗಿ ಕಾಶ್ಮೀರಕ್ಕೆ ತೆರಳಲಿದ್ದಾರೆ.ನಿರ್ದೇಶಕ ಚೇತನ್ ಕುಮಾರ್ ಆ್ಯಕ್ಷನ್ ಕಟ್ ಹೇಳುತ್ತಿರುವ ಆ್ಯಕ್ಷನ್ ಕಮರ್ಷಿಯಲ್ ಜೇಮ್ಸ್ ಸಿನಿಮಾದ ಚಿತ್ರೀಕರಣ ಈಗಾಗಲೇ ಆರಂಭವಾಗಿದೆ. ಇದೀಗ ಸಿನಿಮಾದ ಮತ್ತಷ್ಟು ಚಿತ್ರೀಕರಣಕ್ಕಾಗಿ ಜೇಮ್ಸ್ ಚಿತ್ರತಂಡ ಕಾಶ್ಮೀರಕ್ಕೆ ಹಾರಲಿದೆ. 10 ದಿನ ಕಾಶ್ಮೀರದಲ್ಲಿ ನಡೆಯುವ ಜೇಮ್ಸ್ ಸಿನಿಮಾ ಶೂಟಿಂಗ್‍ನಲ್ಲಿ ಹಾಡಿನ ಚಿತ್ರೀಕರಣ, ಫೈಟ್ ಸಿಕ್ವೆನ್ಸ್ ಮತ್ತು ಸಿನಿಮಾದ ಕೆಲವು ಭಾಗಗಳನ್ನು ಚಿತ್ರೀಕರಿಸಲಾಗುತ್ತದೆ.ಈಗಾಗಲೇ ಸಿನಿಮಾದ ಚಿತ್ರೀಕರಣ ಕುರಿತ ಅನುಭವವನ್ನು ನಿರ್ದೇಶಕ ಚೇತನ್ ಕುಮಾರ್ ಹಂಚಿಕೊಂಡಿದ್ದು, ಸಿನಿಮಾ ತಯಾರಕರು ಇಂದಿನಿಂದ ನಟ ಪುನೀತ್ ರಾಜ್‍ಕುಮಾರ್ ಮತ್ತು ಸಿಬ್ಬಂದಿ ಜೇಮ್ಸ್ ತಂಡಕ್ಕೆ ಸೇರಿಕೊಳ್ಳುತ್ತಾರೆ ನಿರೀಕ್ಷೆ ಹೊಂದಿದ್ದಾರೆ. ಕಾಶ್ಮೀರದಲ್ಲಿ ನಡೆಯುವ ಹಾಡಿನ ಚಿತ್ರೀಕರಣಕ್ಕೆ ಎ. ಹರ್ಷ ನೃತ್ಯ ನಿರ್ದೇಶಿಸಲಿದ್ದಾರೆ ಮತ್ತು ಸ್ಟಂಟ್ ಮಾಸ್ಟರ್ ವಿಜಯ್ ಫೈಟಿಂಗ್ ದೃಶ್ಯಾವಳಿಗಳನ್ನು ನಿರ್ದೇಶಿಸಲಿದ್ದಾರೆ.ಈಗಾಗಲೇ ಬಹದ್ದೂರ್, ಭರ್ಜರಿ, ಭರಾಟೆ ಚಿತ್ರವನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿರುವ ನಿರ್ದೇಶಕ ಚೇತನ್ ಕುಮಾರ್‍ಗೆ ಜೇಮ್ಸ್ ಸಿನಿಮಾ ನಾಲ್ಕನೇ ಸಿನಿಮಾವಾಗಿದೆ. ಜೇಮ್ಸ್ ಚಿತ್ರದಲ್ಲಿ ಪುನೀತ್ ಜೊತೆ ನಾಯಕಿಯಾಗಿ ಪ್ರಿಯಾ ಆನಂದ್ ಸಾಥ್ ನೀಡುತ್ತಿದ್ದು, ಚಿತ್ರಕ್ಕೆ ಚರಣ್ ರಾಜ್ ಸಂಗೀತಾ ಸಂಯೋಜಿಸಿದ್ದಾರೆ ಹಾಗೂ ನಿರ್ಮಾಪಕ ಕಿಶೋರ್ ಪತಿಕೊಂಡ ಬಂಡವಾಳ ಹೂಡಿದ್ದಾರೆ.Sign in to your account
Username or Email Address


Password

 Remember Me


