ಬೆಂಗಳೂರು: ಸ್ಯಾಂಡಲ್‍ವುಡ್ ನಟ ರಾಘವೇಂದ್ರ ರಾಜಕುಮಾರ್ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ.ನಿನ್ನೆ ಶೂಟಿಂಗ್ ವೇಳೆ ಅಸ್ವಸ್ಥಗೊಂಡು ಯಶವಂತಪುರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದು, ರಾಘಣ್ಣ ಆರೋಗ್ಯದಲ್ಲಿ ಯಾವುದೇ ತೊಂದರೆ ಇಲ್ಲ. ಚೇತರಿಕೆ ಕಂಡು ಬಂದಿದೆ. ನಾಳೆ ಡಿಸ್ಚಾರ್ಜ್ ಆಗಲಿದ್ದಾರೆ ಅಂದಿದ್ದಾರೆ.ರಾಘಣ್ಣನ ಯೋಗಕ್ಷೇಮ ವಿಚಾರಿಸಲು ರಾಜಕುಮಾರ್ ಕುಟುಂಬಸ್ಥರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಶಿವರಾಜ್ ಕುಮಾರ್ ಮಾತನಾಡಿ, 2 ವರ್ಷದಿಂದ ತುಂಬಾ ಬ್ಯುಸಿಯಾಗಿದ್ರು. ರೆಸ್ಟ್ ಲೆಸ್ ಆಗಿ ಕೆಲಸ ಮಾಡಿದ್ರಿಂದ ಹೀಗಾಗಿದೆ. ಹೃದಯಕ್ಕೆ ಸಂಬಂಧಿಸಿದ ಚಿಕ್ಕ ಶಸ್ತ್ರಚಿಕಿತ್ಸೆ ಆಗಿದೆ. ರಾಘು ನಗ್ ನಗುತ್ತಾ ಮಾತನಾಡ್ತಿದ್ದಾರೆ ಎಂದ್ರು.ಪುನೀತ್ ಕೂಡ ಶೂಟಿಂಗ್‍ಗೆ ಹೋಗಿ ಸುಸ್ತು ಆಗಿದೆ ಅಂದ್ರು. ರಾಘವೇಂದ್ರ ರಾಜ್‍ಕುಮಾರ್ ಸೋದರಮಾವ ಚಿನ್ನೇಗೌಡ ಮಾತನಾಡಿ ಅಭಿಮಾನಿಗಳ ಹಾರೈಕೆ ಅವರಿಗಿದೆ. ಸದ್ಯ ಯಾವುದೇ ತೊಂದರೆ ಇಲ್ಲ ಅಂದ್ರು.Sign in to your account
Username or Email Address


Password

 Remember Me


