ಬೆಂಗಳೂರು: ದಿವಂಗತ ನಟ ಚಿರಂಜೀವಿ ಸರ್ಜಾ ಅಭಿನಯದ ರಾಜಮಾರ್ತಾಂಡ ಸಿನಿಮಾದ ಟ್ರೈಲರ್‍ ನನ್ನು ಅವರ ಮಗ ಬಿಡುಗಡೆಗೊಳಿಸಲಿದ್ದಾನೆ.ಚಿರು ಸಹೋದರ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ ಇದೇ ಶುಕ್ರವಾರ ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಹೊತ್ತಿನಲ್ಲಿಯೇ ನಟ ಚಿರಂಜೀವಿ ಸರ್ಜಾ ಅಭಿನಯದ ರಾಜಮಾರ್ತಾಂಡ ಸಿನಿಮಾ ಟ್ರೈಲರ್ ಬಿಡುಗಡೆಯಾಗುತ್ತಿದ್ದು, ಚಿರು ಪುತ್ರ ಜ್ಯೂನಿಯರ್ ಚಿರು ಟ್ರೈಲರ್ ಲಾಂಚ್ ಮಾಡಲಿದ್ದಾನೆ ಎಂದು ಚಿತ್ರತಂಡ ತಿಳಿಸಿದೆ.ರಾಜಾಮಾರ್ತಂಡ ಸಿನಿಮಾಕ್ಕೆ ಚಿರು ಸಹೋದರ ಧ್ರುವ ಸರ್ಜಾ ಕಂಠದಾನ ಮಾಡಿದ್ದು, ನಿರ್ದೇಶಕ ರಾಮ್ ನಾರಾಯಣ್ ಸಿನಿಮಾ ನಿರ್ದೇಶಿಸಿದ್ದಾರೆ ಹಾಗೂ ಅರ್ಜುನ್ ಜನ್ಯ ಸಂಗೀತಾ ಸಂಯೋಜಿಸಿದ್ದಾರೆ. ಅಲ್ಲದೆ ಚಿತ್ರಕ್ಕೆ ಗಣೇಶ್ ಅವರ ಛಾಯಾಗ್ರಹಣವಿದೆ.Sign in to your account
Username or Email Address


Password

 Remember Me


