ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಇತ್ತೀಚೆಗಷ್ಟೇ ಜ್ಯೂನಿಯರ್ ಚಿರು ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಮೂಲಕ ಸುದ್ದಿಯಾಗಿದ್ದರು. ಇದೀಗ ದಿವಂಗತ ಪತಿ ಚಿರು ಅಭಿನಯದ ರಾಜಮಾರ್ತಂಡ ಸಿನಿಮಾ ಕುರಿತಂತೆ ಆಪ್‍ಡೇಟ್ಸ್ ನೀಡುವ ಮೂಲಕ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದಾರೆ.ಹೌದು, ನಟಿ ಮೇಘನಾ ರಾಜ್ ಪತಿಯ ಸಿನಿಮಾಕ್ಕೆ ಧ್ರುವ ಸರ್ಜಾ ವಾಯ್ಸ್ ಡಬ್ ನೀಡುತ್ತಿರುವ ವಿಚಾರವನ್ನು ತಿಳಿಸುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.ಲಾಕ್‍ಡೌನ್ ಸಮಯದಲ್ಲಿ ರಾಜಮಾರ್ತಾಂಡ ಸಿನಿಮಾದ ಡಬ್ಬಿಂಗ್ ಮಾಡಲು ತಯಾರಿ ನಡೆದಿತ್ತು. ಆದರೆ ಚಿರು ಅಗಲಿದ ನಂತರ ಇದೀಗ ಧ್ರುವ ಸರ್ಜಾ ಅಣ್ಣನ ಸಿನಿಮಾಕ್ಕೆ ವಾಯ್ಸ್ ಡಬ್ ನೀಡಲು ಮುಂದಾಗಿದ್ದಾರೆ.ಧ್ರುವ ಅಭಿನಯದ ಪೊಗರು ಸಿನಿಮಾ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದ್ದು, ಚಿತ್ರದ ಇಂಟರ್‍ವೆಲ್ ಸಮಯದಲ್ಲಿ ಚಿರು ಅಭಿನಯದ ರಾಜಮಾರ್ತಾಂಡ ಸಿನಿಮಾದ ಟ್ರೈಲರ್ ಪ್ರಸಾರವಾಗಲಿದೆ.ರಾಜಮಾರ್ತಾಂಡ ಸಿನಿಮಾವನ್ನು ನಿರ್ದೇಶಕ ರಾಮ್ ನಾರಾಯಣ ನಿರ್ದೇಶಿಸುತ್ತಿದ್ದು, ಚಿತ್ರದ ಪ್ರಮುಖ ಪಾತ್ರಗಳಲ್ಲಿ ಓಂ ಪ್ರಕಾಶ್, ದೀಪ್ತಿ ಸತಿ ಮತ್ತು ತ್ರಿವೇಣಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತಾ ಸಂಯೋಜಿಸಿದ್ದು, ಗಣೇಶ್ ಅವರ ಛಾಯಾಗ್ರಹಣವಿದೆ.






 Advertisement 




Sign in to your account
Username or Email Address


Password

 Remember Me


