ಮಡಿಕೇರಿ: ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸುತ್ತಿರುವ ಬಗ್ಗೆ ಹಗುರವಾಗಿ ಮಾತನಾಡುವ, ದೊಡ್ಡವರ ಸಣ್ಣತನದ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಇಬ್ಬರನ್ನೂ ಲೇವಡಿ ಮಾಡಿದ್ದಾರೆ.ದೇಣಿಗೆ ಸಂಗ್ರಹಿಸುವಾಗ ರಾಜ್ಯದ ಯಾರೊಬ್ಬರಿಗೂ ಒತ್ತಾಯದಿಂದ ದೇಣಿಗೆ ಸಂಗ್ರಹಿಸುತ್ತಿದ್ದೇವೆ ಎಂದೆನಿಸಿಲ್ಲ. ಹಾಗೇನಾದರು ರಾಜ್ಯದ ಯಾವುದೇ ಒಬ್ಬ ವ್ಯಕ್ತಿಗೆ ದೇಣಿಗೆ ಸಂಗ್ರಹಿಸುವಾಗ ಒತ್ತಾಯ ಎಂದೆಸಿದ್ದರೆ ಅದರ ಬಗ್ಗೆ ಹೇಳಲಿ ಎಂದಿದ್ದಾರೆ.ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಕೂಡ ಸಮರ್ಪಣಾ ಭಾವದಿಂದ ದೇಣಿಗೆ ನೀಡುತ್ತಿದ್ದಾರೆ. ಹೀಗಿರುವಾಗ ಯಾರೋ ರಾಜಕಾರಣಿಗಳು ರಾಜಕೀಯಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಾ ಸಣ್ಣತನ ಪ್ರದರ್ಶಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.






 Advertisement 




Sign in to your account
Username or Email Address


Password

 Remember Me


