ಕೊಪ್ಪಳ: ಬೀದಿಗೆ ತಳ್ಳಿದ ಪಾಪಿ ಮಕ್ಕಳಿಗಾಗಿ, ಕಾಲಿಲ್ಲದ ತಾಯಿ ಬಂಡಿ ದುರ್ಗಾದೇವಿ ದೇವಸ್ಥಾನದಲ್ಲಿ ಮಕ್ಕಳ ದಾರಿ ಕಾಯುತ್ತಿರುವ ಕರುಣಾಜನಕ ಘಟನೆ ನಡೆದಿದೆ.ದ್ರಾಕ್ಷಯಣಮ್ಮ ಅವರ ಕಾಲು ಗ್ಯಾಂಗ್ರಿನ್ ನಿಂದ ತುಂಡಾಗಿತ್ತು. ಹೀಗಾಗಿ ತಾಯಿಯನ್ನು ಮಕ್ಕಳು ದೇವಸ್ಥಾನದಲ್ಲಿ ಬಿಟ್ಟು ಹೋಗಿದ್ದಾರೆ. ಪಾಪಿ ಮಕ್ಕಳು ಬರುವಿಕೆಗಾಗಿ ತಾಯಿ ಜೀವ ಅಂಗೈಯಲ್ಲಿ ಹಿಡಿದುಕೊಂಡು ಬಂಡಿ ದುರ್ಗಾದೇವಿ ದೇವಸ್ಥಾನದಲ್ಲಿ ಕಾಯುತ್ತಿರುವ ದೃಶ್ಯ ಮನಕಲಕುತ್ತಿದೆ.ದೇವಸ್ಥಾನದಲ್ಲಿ ತಾಯಿಯನ್ನ ಬಿಟ್ಟು ಹೋದ ಮಕ್ಕಳು ವಿರೇಶ್ ಹಾಗೂ ಚಂದ್ರಕಾಂತ್ ಆಗಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಗ್ಯಾಂಗ್ರಿನ್ ಇಂದ ದ್ರಾಕ್ಷಾಯಣಮ್ಮನ ಕಾಲು ತುಂಡಾಗಿತ್ತು. ಮಕ್ಕಳು ಆಸ್ಪತ್ರೆಗೆ ಬರದೇ ಇದ್ದಿದ್ದಕ್ಕೆ ವೈದ್ಯರೇ ಮನೆಗೆ ಬಿಟ್ಟು ಹೋಗಿದ್ದರು. ಆದರೆ ಮಕ್ಕಳು ಕಾಲಿಲ್ಲದ ತಾಯಿಯನ್ನ ದೇವಸ್ಥಾನದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.ಒಂದು ವಾರದಿಂದ ದೇವಸ್ಥಾನದಲ್ಲಿರುವ ದ್ರಾಕ್ಷಾಯಣಮ್ಮ ಮಕ್ಕಳಿಗಾಗಿ ಕಾಯುತ್ತಿದ್ದಾರೆ. ಅಕ್ಕ ಪಕ್ಕದ ಮನೆಯವರೇ ಊಟ ತಿಂಡಿ ನೀಡುತ್ತಿದ್ದಾರೆ. ಮಕ್ಕಳು ಬೀದಿ ಪಾಲು ಮಾಡಿದರು ಈ ತಾಯಿ ಜೀವ ಮಕ್ಕಳಿಗಾಗಿ ಹಂಬಲಿಸುತ್ತಿದೆ.






 Advertisement 




Sign in to your account
Username or Email Address


Password

 Remember Me


