ಬೆಂಗಳೂರು: ದೇಶವನ್ನು, ಸಮಾಜವನ್ನು ಒಡೆಯುವ ಕೆಲಸ ಮಾಡಬೇಡಿ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ರಾಮದಾಸ್‌ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.ರಾಮ ಮಂದಿರ ನಿಧಿ ಸಂಗ್ರಹಣಾ ಅಭಿಯಾನದಲ್ಲಿ ಹಿಂದೂಗಳು ಮಾತ್ರವಲ್ಲದೇ, ಮುಸಲ್ಮಾನ, ಕ್ರೈಸ್ತರೂ ಸಹ ದೇಣಿಗೆಯನ್ನು ರಾಮನ ಚರಣಕ್ಕೆ ಅರ್ಪಿಸಿದ್ದಾರೆ. ಇದನ್ನೊಂದು ಬಾರಿ ತಿಳಿಯುವ ಪ್ರಯತ್ನ ಮಾಡಿ. ಯಾರ ಮನಸ್ಸಲ್ಲೂ ಇಲ್ಲದ ವಿಷ ಬೀಜ ಬಿತ್ತುವ ಕೆಲಸ ಮಾಡಬೇಡಿ ಎಂದು ಟ್ವೀಟ್‌ ಮಾಡಿದ್ದಾರೆ.ಟ್ವೀಟ್‌ನಲ್ಲಿ ಏನಿದೆ?
ಕುಮಾರಸ್ವಾಮಿ ಅವರೇ ನೀವು ಅಂತಃಕರಣದಿಂದ ಮಾತನಾಡಿ, ನೀವು, ನಿಮ್ಮ ಸಹೋದರ ಹಾಗೂ ನಿಮ್ಮ ಪಿತಾಶ್ರೀ ಅವರು ತಿಂಗಳಲ್ಲಿ ಹೆಚ್ಚಿನ ದಿನ ಪೂಜೆ, ಹೋಮಗಳಲ್ಲೇ ತೊಡಗುತ್ತೀರಿ ಎಂಬುದು ಜನತೆಗೆ ಗೊತ್ತಿರುವ ವಿಷಯ.ಕುಮಾರಸ್ವಾಮಿ ಅವರೇ ನೀವು ಅಂತಃಕರಣದಿಂದ ಮಾತನಾಡಿ, ನೀವು, ನಿಮ್ಮ ಸಹೋದರ ಹಾಗೂ ನಿಮ್ಮ ಪಿತಾಶ್ರೀ ಅವರು ತಿಂಗಳಲ್ಲಿ ಹೆಚ್ಚಿನ ದಿನ ಪೂಜೆ, ಹೋಮಗಳಲ್ಲೇ ತೊಡಗುತ್ತೀರಿ ಎಂಬುದು ಜನತೆಗೆ ಗೊತ್ತಿರುವ ವಿಷಯ.
1/3 pic.twitter.com/m4HtoLO3yC— S A Ramadass (@ramadassmysuru) February 17, 2021ಮಹಾತ್ಮಾ ಗಾಂಧೀಜಿ, ನೆಹರೂ, ಅಂಬೇಡ್ಕರ್ ಸಹ ಆರ್‌ಎಸ್‌ಎಸ್‌ ಕಾರ್ಯದ ಬಗ್ಗೆ ಶ್ಲಾಘಿಸಿದ್ದಾರೆ. ಆರ್‌ಎಸ್‌ಎಸ್‌ ಬಗ್ಗೆ ಜನತೆಗೆ ಧೈರ್ಯದ ಭಾವನೆ ಇದೆಯೇ ಹೊರತು ಹೆದರಿಕೆಯ ಭಾವನೆ ಇಲ್ಲ. ಇವನ್ನೆಲ್ಲಾ ತಿಳಿದು ಇನ್ನಾದರೂ ದೇಶವನ್ನು, ಸಮಾಜವನ್ನು ಒಡೆಯುವ ಕೆಲಸ ಮಾಡಬೇಡಿ.Sign in to your account
Username or Email Address


Password

 Remember Me


