ಚಿಕ್ಕಬಳ್ಳಾಪುರ: ಕುಡಿದ ಅಮಲಿನಲ್ಲಿ ತನ್ನ ತಂದೆಯನ್ನೇ ಮಗ ಕೊಂದಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಚನ್ನಭೈರೇನಹಳ್ಳಿಯಲ್ಲಿ ನಡೆದಿದೆ.ಮುನೇಗೌಡ(50) ಮಗನಿಂದ ಕೊಲೆಯಾದ ತಂದೆ. ಮಗ ಮಂಜುನಾಥ್ ಕೊಲೆ ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ. ತಂದೆ ಮಗನ ಜಗಳದಲ್ಲಿ ತಾತ ಮಗನ ಕೈಯಿಂದಲೇ ಅಪ್ಪನ ಕೊಲೆ ಮಾಡಿಸಿದ್ದಾನೆ.ತಂದೆ ಮಗ ಹಾಗೂ ತಾತ ಮೂವರಿಗೂ ಮದ್ಯ ಸೇವಿಸುವ ಚಟವಿತ್ತು. ಹೀಗಾಗಿ ಕುಡಿದ ಅಮಲಿನಲ್ಲಿ ಆಗಾಗ್ಗೆ ತಂದೆ, ಮಗ ಜಗಳ ಆಡೋದು ಮಾತಿಗೆ ಮಾತು ಬೆಳೆಸೋದು ಸಾಮಾನ್ಯ ಎಂಬಂತಾಗಿತ್ತು. ಇದೇ ರೀತಿ ನಿನ್ನೆ ರಾತ್ರಿ ಸಹ ತಂದೆ ಮಗ ಇಬ್ಬರು ಮಾತಿಗೆ ಮಾತು ಬೆಳೆಸಿ ಜಗಳವಾಡಿದ್ದಾರೆ. ಈ ವೇಳೆ ಕೊಲೆಯಾದ ಮುನೇಗೌಡ ತಂದೆ ರಂಗಪ್ಪ ‘ಏಯ್ ಏನೋ ಯಾವಗ್ಲೂ ಇದೇ ಮಾತಿಗೆ ಮಾತು ಸಾಯಿಸುಬಿಡು ಅಂತ ಪ್ರೇರೇಪಿಸಿದ್ದಾನೆ’ ತಾತನ ಮಾತು ಕೇಳಿದ ಮೊಮ್ಮಗ ತನ್ನ ತಂದೆಯನ್ನೆ ಕೊಲೆ ಮಾಡಿದ್ದಾನೆ.ಮಂಜುನಾಥ್ ಮನೆಯಲ್ಲಿದ್ದ ತರಕಾರಿ ಕತ್ತರಿಸುವ ಚೂಪಾದ ಚಾಕುವನ್ನು ತೆಗೆದುಕೊಂಡು ತಂದೆಗೆ ಇರಿದುಕೊಂದಿದ್ದಾನೆ. ಈ ಸಂಬಂಧ ಮಂಚೇನಹಳ್ಳಿ ಪೊಲೀಸರು ಮಗ ಮಂಜುನಾಥ್ ಹಾಗೂ ತಾತ ರಂಗಪ್ಪನನ್ನು ಬಂಧಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.






 Advertisement 




Sign in to your account
Username or Email Address


Password

 Remember Me


