ಮಂಡ್ಯ: ಚಾಲೆಂಜಿಂಗ್ ಸ್ಟಾರ್‍ಗೆ ಇಂದು 44ನೇ ವರ್ಷದ ಹುಟ್ಟುಹಬ್ಬ ಸಂಭ್ರಮ. ಈ ಹಿನ್ನೆಲೆಯಲ್ಲಿ ನಟನ ಅಭಿಮಾನಿಯೋರ್ವ ಅರ್ಥ ಪೂರ್ಣವಾಗಿ ಆಚರಣೆ ಮಾಡಿದ್ದಾರೆ.ಮಂಡ್ಯದ ವಿಕಾಸನ ಅನಾಥಶ್ರಮದಲ್ಲಿನ ಮಕ್ಕಳೊಂದಿಗೆ ಓಂಕಾರ್ ಎಂಬ ಅಭಿಮಾನಿ ಅರ್ಥ ಪೂರ್ಣವಾಗಿ ಆಚರಣೆ ಮಾಡಿದ್ದಾರೆ. ಅನಾಥಾಶ್ರಮದ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ದರ್ಶನ್ ಅವರಿಗೆ ಓಂಕಾರ್ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು. ಇದೇ ವೇಳೆ ಅಲ್ಲಿನ ಮಕ್ಕಳಿಗೆ ಕೇಕ್, ಸ್ವೀಟ್, ಹಣ್ಣು-ಹಂಪಲು ನೀಡಿದ್ದಲ್ಲದೇ ಬಿರಿಯಾನಿಯನ್ನು ಸಹ ಹಂಚಿದ್ದಾರೆ.ಓಂಕಾರ್ ಅವರು ಮೂಲತಃ ಆಂಧ್ರಪ್ರದೇಶದ ಮೂಲದವರಾಗಿದ್ದು, ಕಳೆದ 15 ವರ್ಷಗಳಿಂದ ಮಂಡ್ಯದಲ್ಲಿ ನೆಲಸಿದ್ದಾರೆ. ಕ್ಷೌರಿಕ ವೃತ್ತಿ ಮಾಡುವ ಓಂಕಾರ್ ಅವರಿಗೆ ದರ್ಶನ್ ಎಂದರೆ ಎಲ್ಲಿಲ್ಲದ ಪ್ರೀತಿ. ದರ್ಶನ್ ಅವರ ಸಿನಿಮಾ ರಿಲೀಸ್ ಆದ ವೇಳೆ ಸಿನಿಮಾ ಕಟೌಟ್ ಹಾಕಿ ಹೂವಿನ ಹಾರ ಹಾಕುತ್ತಾರೆ. ಅಲ್ಲದೇ ಪ್ರತಿ ವರ್ಷ ದರ್ಶನ್ ಹುಟ್ಟುಹಬ್ಬದ ದಿನದಂದು ಸಮಾಜಮುಖಿ ಕೆಲಸ ಮಾಡುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.Sign in to your account
Username or Email Address


Password

 Remember Me


