ಬೆಂಗಳೂರು: ತಂದೆ ಆರಾಮಾಗಿದ್ದಾರೆ. ಶೂಟಿಂಗ್ ಇತ್ತು ವೇಳೆ ಸುಸ್ತಾಗಿತ್ತು. ಅದಕ್ಕೆ ಆಡ್ಮಿಟ್ ಮಾಡಿದ್ದಾರೆ ಅಷ್ಟೇ ಎಂದು ನಟ ರಾಘವೇಂದ್ರ ರಾಜ್ ಕುಮಾರ್ ಮಗ ವಿನಯ್ ರಾಜ್ ಕುಮಾರ್ ಹೇಳಿದ್ದಾರೆ.ಇಂದು ಸಂಜೆ ರಾಘಣ್ಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿನಯ್, ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಸ್ವಲ್ಪ ಸುಸ್ತಾದರು. ಹೀಗಾಗಿ ಚೆಕಪ್‍ಗೆ ಅಂತ ಆಸ್ಪತ್ರೆಗೆ ಬಂದಿದ್ದಾರೆ. ಇದು ರೇಗುಲರ್ ಚೆಕ್ ಅಪ್ ತರಾನೇ ಆಗಿದ್ದು, ಯಾರೂ ಆತಂಕ ಪಡುವ ಅಗತ್ಯ ಇಲ್ಲ ಎಂದು ತಂದೆಯ ಆರೋಗ್ಯದ ಬಗ್ಗೆ ತಿಳಿಸಿದ್ದಾರೆ. ಅಲ್ಲದೆ ನಾಳೆವರೆಗೂ ಅಬ್ಸರ್ವೇಷನಲ್ಲಿ ಇದ್ದು ಬೆಳಗ್ಗೆ ಡಿಸ್ಚಾರ್ಜ್ ಆಗ್ತಾರೆ ಎಂದು ವಿನಯ್ ಸ್ಪಷ್ಟಪಡಿಸಿದ್ದಾರೆ.ರಾಘಣ್ಣ ಅವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಇಂದು ಸಂಜೆ 6 ಗಂಟೆಗೆ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಯಾವುದೇ ಗಂಭೀರ ಸಮಸ್ಯೆ ಇಲ್ಲ ಎಂದು ಆಸ್ಪತ್ರೆ ವೈದ್ಯರು ಹೇಳಿದ್ದು, ನಾಳೆ ಬೆಳಗ್ಗೆ ಡಿಸ್ಚಾರ್ಜ್ ಆಗುವ ಸಾಧ್ಯತೆಗಳಿವೆ. ಸದ್ಯ ರಾಘಣ್ಣನ ಜೊತೆ ನಟ ಪುನೀತ್ ಆಸ್ಪತ್ರೆಯಲ್ಲಿದ್ದಾರೆ.ಇಂದು ಸಿನಿಮಾ ಶೂಟಿಂಗ್ ವೇಳೆ ಸುಸ್ತಾಗಿದ್ದ ರಾಘವೇಂದ್ರ ರಾಜ್‍ಕುಮಾರ್, ನಿನ್ನೆಯಷ್ಟೇ ಹೊಸ ಸಿನಿಮಾ ‘ಬೆಳಕು’ ವಿನ ಮುಹೂರ್ತ ಆಗಿತ್ತು. ಈ ಸಂಬಂಧ ಇಂದು ನಟ ಸುದ್ದಿಗೋಷ್ಟಿ ನಡೆಸಿದ್ದರು. ಅಲ್ಲದೆ ಮೊನ್ನೆಯಷ್ಟೇ ದಾವಣಗೆರೆಗೆ ತೆರಳಿ ಪೊಗರು ಆಡಿಯೋ ಲಾಂಚ್ ನಲ್ಲಿ ಭಾಗಿಯಾಗಿದ್ದರು.ಆಸ್ಪತ್ರೆಗೆ ಆಗಮಿಸಿದ ರಾಘವೇಂದ್ರ ರಾಜಕುಮಾರ್ ಅಕ್ಕ ಲಕ್ಷ್ಮಿ, ಬಾವ ಗೋವಿಂದ್ ಆಗಮಿಸಿ ರಾಘಣ್ಣನ ಆರೋಗ್ಯ ವಿಚಾರಿಸಿದ್ದಾರೆ.






 Advertisement 




Sign in to your account
Username or Email Address


Password

 Remember Me


