ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಮೇಳೆಕೋಟೆ ಸರ್ಕಾರಿ ಪ್ರೌಢಶಾಲೆಯ 10ನೇ ವಿದ್ಯಾರ್ಥಿಗಳಿಗೆ ಪಬ್ಲಿಕ್ ಟಿವಿ, ರೋಟರಿ ಜ್ಞಾನದೀವಿಗೆ ಕಾರ್ಯಕ್ರಮದ ಮೂಲಕ ಉಚಿತ ಟ್ಯಾಬ್ ವಿತರಣೆ ಮಾಡಲಾಯಿತು.ಬೆಂಗಳೂರು ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ರವಿಕುಮಾರ್ ಪಬ್ಲಿಕ್ ಟಿವಿ ಸಮಾಜಮುಖಿಕಾರ್ಯ ಮೆಚ್ಚಿ ಟ್ಯಾಬ್‍ಗಳನ್ನ ಕೊಡುಗೆ ನೀಡಿದ್ದಾರೆ. ರವಿಕುಮಾರ್ ಅವರ ಅನುಪಸ್ಥಿತಿಯಲ್ಲಿ ನಿಮ್ಮ ಪಬ್ಲಿಕ್ ಟಿವಿ ತಂಡ ಶಾಲಾ ಮಕ್ಕಳಿಗೆ ಇಂದು ಉಚಿತ ಟ್ಯಾಬ್ ವಿತರಿಸಿದೆ.ಟ್ಯಾಬ್ ಪಡೆದುಕೊಂಡ ವಿದ್ಯಾರ್ಥಿಗಳು ಹಾಗೂ ಶಾಲಾ ಶಿಕ್ಷಕರು, ಎಸ್‍ಡಿಎಂಸಿ ಅಧ್ಯಕ್ಷರು ಪಬ್ಲಿಕ್ ಟಿವಿ ಹಾಗೂ ಸಹೃದಯಿ ದಾನಿಗಳಾದ ರವಿಕುಮಾರ್ ರವರಿಗ ಧನ್ಯವಾದಗಳನ್ನು ಅರ್ಪಿಸಿದರು. ಈ ಹಿಂದೆ ರವಿಕುಮಾರ್ ರವರು ಹಣಬೆ ಸರ್ಕಾರಿ ಶಾಲೆಯ ಮಕ್ಕಳಿಗೂ ಸಹ ತಮ್ಮ ತಂದೆ ವ್ಯಾಸಂಗ ಮಾಡಿದ ಶಾಲೆ ಎಂಬ ನೆನಪಿನಾರ್ಥಕವಾಗಿ ಫ್ರೀ ಟ್ಯಾಬ್ ವಿತರಿಸಿದ್ದರು.






 Advertisement 




Sign in to your account
Username or Email Address


Password

 Remember Me


