ಚಿಕ್ಕಬಳ್ಳಾಪುರ: ಮದ್ಯ ಸಾಗಾಟ ಮಾಡುತ್ತಿದ್ದ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಗೌರಿಬಿದನೂರು ಮಾರ್ಗದ ಕಣಿವೆ ಬಳಿ ನಡೆದಿದೆ.ನಗರದ ಮದ್ಯ ಸಂಗ್ರಹಣಾ ಗೋದಾಮಿನಿಂದ ಗೌರಿಬಿದನೂರಿನ 4 ಮದ್ಯದಂಗಡಿಗಳಿಗೆ ಮದ್ಯ ಸರಬರಾಜು ಮಾಡಲಾಗುತ್ತಿತ್ತು. ಆದರೆ ಚಾಲಕನ ನಿಯಂತ್ರಣ ತಪ್ಪಿದ ವಾಹನ ಪಲ್ಟಿಯಾಗಿ ಬಾಟಲಿಗಳು ಮಾರ್ಗ ಮಧ್ಯದಲ್ಲಿಯೇ ಒಡೆದಿವೆ.ಕಣಿವೆಯ ಇಳಿಜಾರಿನ ಬಳಿ ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಉರುಳಿ ಬಿದ್ದಿದೆ. ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯದ ಪಾಕೆಟ್, ಬಿಯರ್ ಬಾಟಲಿಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಚಿಕ್ಕಬಳ್ಳಾಪುರ ಗ್ರಾಮಾಂತರ  ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಟೆಂಪೋದಲ್ಲಿದ್ದ ಸಿಲುಕಿದ್ದ ಚಾಲಕನನ್ನ ಹರಸಾಹಸ ಪಟ್ಟು ಹೊರೆತಗೆದು ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಇದೇ ಜಾಗದಲ್ಲಿ ಕಳೆದ ಒಂದು ವಾರದ ಹಿಂದೆ ಅಡುಗೆ ಎಣ್ಣೆ ಸಾಗಾಟ ಮಾಡುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿ ಅಡುಗೆ ಎಣ್ಣೆ ರಸ್ತೆ ಪಾಲಾಗಿತ್ತು.






 Advertisement 




Sign in to your account
Username or Email Address


Password

 Remember Me


