ಬೆಂಗಳೂರು: ಬಿಗ್‍ಬಾಸ್ ಸೀಸನ್ 6ರ ವಿನ್ನರ್ ಶಶಿ ಮಾಡರ್ನ್ ರೈತ ಅಂತಾನೇ ಫೇಮಸ್. ಬಿಗ್ ಬಾಸ್ ವಿನ್ನರ್ ಆದ ಮೇಲೆ ಸಾಮಾಜಿಕ ಮುಖಿ ಕಾರ್ಯಗಳಲ್ಲಿ ತೊಡಗಿಕೊಂಡು ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ಈಗ ಬಿಗ್‍ಬಾಸ್ ವಿನ್ನರ್ ಶಶಿ ಅವರ ಹೊಸ ಲುಕ್ ಔಟ್ ಆಗಿದೆ. ಹೊಸ ಸಿನಿಮಾಗಾಗಿ ಫುಲ್ ವರ್ಕೌಟ್ ಮಾಡಿ ಸಿಕ್ಸ್ ಪ್ಯಾಕ್ ಮಾಡಿಕೊಂಡಿದ್ದು, ಫುಲ್ ರಗಡ್ ಲುಕ್ ನಲ್ಲಿ ಕಾಣಿಸುತ್ತಿದ್ದಾರೆ.ಮೆಹಬೂಬಾ ಸಿನಿಮಾದಲ್ಲಿ ಶಶಿ ನಾಯಕ ನಟರಾಗಿ ಅಭಿನಯಿಸುತ್ತಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿದಿದ್ದು, ಹಾಡುಗಳು ಮತ್ತು ಸಾಹಸ ದೃಶ್ಯಗಳ ಶೂಟಂಗ್ ಬಾಕಿ ಇದೆ. ಫೈಟ್ ದೃಶ್ಯಗಳಿಗಾಗಿ ಶಶಿ ಸಿಕ್ಸ್ ಪ್ಯಾಕ್ ಮಾಡಿಕೊಂಡು ಕಟ್ಟುಮಸ್ತಾಗಿ ಮಿಂಚುತ್ತಿದ್ದಾರೆ.ಸಿಕ್ಸ್ ಪ್ಯಾಕ್ ಮಾಡುವುದಕ್ಕೆ 40 ರಿಂದ 50 ದಿನ ಸಮಯ ತೆಗೆದುಕೊಂಡೆ ಅಂತಾರೆ ಶಶಿ. ಲಾಕ್‍ಡೌನ್ ಟೈಂನಲ್ಲಿ ಊರಲ್ಲಿ ಕೃಷಿ ನೋಡಿಕೊಳ್ತಾ ಇದ್ದೆ. ಅ ಟೈಂ ನಲ್ಲಿ ಸ್ವಲ್ಪ ವರ್ಕೌಟ್ ಮಾಡಿ ಬೇಸಿಕ್ ಶೇಫ್ ಗೆ ತಂದಿದ್ದೆ ನಂತರ ಬೆಂಗಳೂರಿಗೆ ಬಂದ ನಂತರ ದಿನಕ್ಕೆ ಎರಡು ಬಾರಿ ವರ್ಕೌಟ್ ಮಾಡುತ್ತಿದೆ. ಹಾಗಾಗಿ ಇಷ್ಟು ಬೇಗ ಸಿಕ್ಸ್ ಪ್ಯಾಕ್ ಬರೋಕೆ ಸಾಧ್ಯ ಆಯ್ತು ಅಂತಾರೆ. ಜೊತೆಗೆ ಪ್ರೋಟಿನ್ ಮತ್ತು ನಾರಿನ ಅಂಶದ ಆಹಾರ ತೆಗೆದುಕೊಳ್ಳುತ್ತಿದ್ದೇನೆ ಎಂದು ಶಶಿ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.Sign in to your account
Username or Email Address


Password

 Remember Me


