ಚಿಕ್ಕಬಳ್ಳಾಪುರ: ಪ್ರೇಮಿಗಳ ದಿನಾಚರಣೆ ಹಿನ್ನೆಲೆ ಇಂದು ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಪ್ರೇಮಿಗಳ ದಂಡು ಹರಿದು ಬರುತ್ತಿದೆ.ಫೆಬ್ರವರಿ 14 ಪ್ರೇಮಿಗಳ ಪಾಲಿಗೆ ವಿಶೇಷ ದಿನ. ಈ ದಿನದಂದು ಪ್ರೇಮಿಗಳು ತಮ್ಮ ಜೋಡಿಗಳೊಂದಿಗೆ ಜೋಡಿ ಹಕ್ಕಿಗಳಂತೆ ವಿಶೇಷ ಸ್ಥಳಗಳಿಗೆ ಭೇಟಿ ನೀಡಿ ದಿನವೆಲ್ಲಾ ಸುತ್ತಾಡುವ ಮೂಲಕ ಕಾಲ ಕಳೆಯುತ್ತಾರೆ.ಸದ್ಯ ಇಂದು ಪ್ರೇಮಿಗಳ ಪಾಲಿನ ಸ್ವರ್ಗಧಾಮ, ಪ್ರೇಮಧಾಮ ಎಂದೇ ಪ್ರಸಿದ್ಧಿ ಪಡೆದಿರುವ ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಸಾವಿರಾರು ಮಂದಿ ಪ್ರೇಮಿಗಳು. ಬೆಳ್ಳಂಬೆಳಿಗ್ಗೆ ಕಾರು ಬೈಕ್ ಗಳಲ್ಲಿ ಆಗಮಿಸಿದ್ದಾರೆ. ಇದೀಗ ನಂದಿಬೆಟ್ಟ ಪ್ರೇಮ ಪಕ್ಷಿಗಳಿಂದ ತುಂಬಿ ತುಳುಕುತ್ತಿದೆ.ಸಾವಿರಾರು ಸಂಖ್ಯೆಯಲ್ಲಿ ಪ್ರೇಮಿಗಳು ನಂದಿಗಿರಿ ಗ್ರಾಮಕ್ಕೆ ಆಗಮಿಸಿದ್ದರಿಂದ ನಂದಿಗಿಧಾಮದ ತಿರುವುಗಳಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಎದುರಾಗಿದೆ. ಹಾಗಾಗಿ ಮುಂಜಾಗ್ರತ ಕ್ರಮವಾಗಿ ಪೊಲೀಸರ ನಿಯೋಜನೆ ಮಾಡಲಾಗಿದೆ.Sign in to your account
Username or Email Address


Password

 Remember Me


