ಬೆಂಗಳೂರು: ಗ್ರೇಟಾ ಥನ್ ಬರ್ಗ್ ಟೂಲ್‌ ಕಿಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಹೋರಾಟಗಾರ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.ಫ್ರೈಡೆ ಫಾರ್ ಫ್ಯೂಚರ್ ಸಂಸ್ಥಾಪಕಿ ದಿಶಾ ರವಿ(21) ಬಂಧಿತ ಆರೋಪಿ. ಬೆಂಗಳೂರಿನ ಸೋಲದೇವನಹಳ್ಳಿಯಲ್ಲಿ ನಿವಾಸದಲ್ಲಿ ದಿಶಾ ರವಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ದೇಶದ್ರೋಹ, ಕ್ರಿಮಿನಲ್ ಪಿತೂರಿ ಮತ್ತು ಟೂಲ್‌ ಕಿಟ್‌ ಮೂಲಕ ದ್ವೇಷ ಉತ್ತೇಜಿಸಿದ ಆರೋಪದ ಅಡಿ ಬಂಧನ ಮಾಡಲಾಗಿದೆ. ನಗರ ಪ್ರಸಿದ್ಧ ಕಾಲೇಜಿನಲ್ಲಿ ಎಂಬಿಎ ಪದವಿ ಓದಿರುವ ದಿಶಾ ಕಂಪನಿಯೊಂದರಲ್ಲಿ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದಾಳೆ. ಈಕೆಯ ತಂದೆ ಮೈಸೂರಿನಲ್ಲಿ ಅಥ್ಲೆಟಿಕ್ಸ್‌ ಕೋಚ್‌ ಆಗಿದ್ದು ತಾಯಿ ಗೃಹಿಣಿಯಾಗಿದ್ದಾರೆ. ಪ್ರತಿಭಟನೆ  ಬೆಂಬಲ ನೀಡಲು ಟೂಲ್ ಕಿಟ್ ಸೃಷ್ಟಿಸಿದ  ಪಡೆದ ಆರೋಪ ದಿಶಾ ರವಿ ಮೇಲಿದೆ.ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಸಂಬಂದ ಹಲವಾರು ವಿದೇಶಿ ಸೆಲೆಬ್ರಿಟಿಗಳು ಬೆಂಬಲಿಸಿ ಟ್ವೀಟ್‌ ಮಾಡಿದ್ದರು. ಈ ಪೈಕಿ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್‌ ಟ್ವೀಟ್‌ ಮಾಡುವುದರ ಜೊತೆ ಜಾಗತಿಕ ಬೆಂಬಲ ನೀಡಬೇಕು ಎಂದು ಹೇಳಿ ಪ್ರತಿಭಟನೆಯ ಟೂಲ್‌ಕಿಟ್‌ ಇರುವ ಗೂಗಲ್‌ ಡಾಕ್ಯುಮೆಂಟ್‌ ಪ್ರಕಟಮಾಡಿದ್ದರು. ಈ ಡಾಕ್ಯುಮೆಂಟ್‌ ಪ್ರಕಟವಾದ ಬಳಿಕ ದೆಹಲಿ ಪೊಲೀಸರು ಐಪಿಸಿ ಸೆಕ್ಷನ್ 124ಎ , 153 ಎ ಅಡಿ ಎಫ್ಐಆರ್‌ ದಾಖಲಿಸಿದ್ದರು. ಬಳಿಕ ಗೂಗಲ್‌ ಕಂಪನಿಗೆ ಪತ್ರ ಬರೆದು ಟೂಲ್‌ಕಿಟ್‌ ಬಗ್ಗೆ ಮತ್ತಷ್ಟು ಮಾಹಿತಿ ನೀಡುವಂತೆ ಕೋರಿದ್ದರು. ಗೂಗಲ್‌ ತನಿಖೆಗೆ ಸಂಬಂಧಿಸಿದ ಮಾಹಿತಿ ನೀಡುವುದಾಗಿ ತಿಳಿಸಿತ್ತು.Sign in to your account
Username or Email Address


Password

 Remember Me


