ಹಾವೇರಿ: ಮೆಕ್ಕೆಜೋಳ ತೆನೆಗಳ ರಾಶಿಗೆ ಆಕಸ್ಮಿಕ ಬೆಂಕಿ ತಗುಲಿ ಧಗಧಗ ಹೊತ್ತಿ ಉರಿದಿರುವ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಚಿನ್ನಿಕಟ್ಟಿ ಗ್ರಾಮದಲ್ಲಿ ನಡೆದಿದೆ.ಗಣೇಶಪ್ಪ ಹಳೇಮನಿ, ವಿಜಯಕುಮಾರ ಹಳೇಮನಿ ಮತ್ತು ಪರಶುರಾಮ ಹಳೇಮನಿ ಎಂಬ ರೈತರು ಹದಿನೆಂಟು ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದಿದ್ದರು. ಈ ರೈತರು ಒಕ್ಕಣೆ ಮಾಡಲು ಕಣದಲ್ಲಿ ಹಾಕಿದ್ದ ಮೆಕ್ಕೆಜೋಳದ ತೆನೆಗಳಿಗೆ ಅದು ಹೇಗೋ ಆಕಸ್ಮಿಕ ಬೆಂಕಿ ತಗುಲಿ ಮೆಕ್ಕೆಜೋಳದ ತೆನೆಗಳು ಧಗಧಗ ಹೊತ್ತಿ ಉರಿದು ಸುಟ್ಟು ಕರಕಲಾಗಿದೆ.ವಿಷಯ ತಿಳಿದು ಬೆಂಕಿ ನಾಂದಿಸಲು ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ. ಈ ಕುರಿತಂತೆ ಬ್ಯಾಡಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.Sign in to your account
Username or Email Address


Password

 Remember Me


