ಮಡಿಕೇರಿ: ಕಾಲೇಜಿಗೆ ಚಕ್ಕರ್ ಹಾಕಿದ ವಿದ್ಯಾರ್ಥಿಗಳು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲೇ ಪಬ್‍ಜಿ ಗೇಮ್ ಆಡುತ್ತಾ ಕಾಲ ಕಳೆದಿದ್ದಾರೆ.ಕೊಡಗಿನ ಕುಶಾಲನಗರ ವ್ಯಾಪ್ತಿಯ ಕಾಲೇಜು ವಿದ್ಯಾರ್ಥಿಗಳ ಗೇಮ್ ಪ್ಲಾನ್ ಇದಾಗಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕಾಲೇಜಿಗೆ ಹೋಗುತ್ತೇವೆಂದು ಬೆಳಗ್ಗೆ ತಮ್ಮ ಮನೆಗಳಿಂದ ಕೆಎಸ್‌ಆರ್‌ಟಿಸಿ ಬಸ್ ನಲ್ಲಿ ನಗರಕ್ಕೆ ಆಗಮಿಸುತ್ತಾರೆ. ಆದರೆ ಕೆಲ ವಿದ್ಯಾರ್ಥಿಗಳು ಕಾಲೇಜಿಗೆ ಹೋಗದೆ ಕುಶಾಲನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲೇ ಪಬ್‍ಜಿ ಗೇಮ್ ಅಡಿಕೊಂಡು ಕಾಲ ಕಳೆಯುತ್ತಾರೆ. ಬಳಿಕ ಬಸ್ ಹತ್ತಿಕೊಂಡು ಸಂಜೆ ಮನೆಗೆ ತೆರಳುತ್ತಾರೆ.ಕಾಲೇಜು ಆರಂಭದಿಂದಲೂ ಕೆಲ ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲೇ ಗೇಮ್ ಅಡಿಕೊಂಡು ದಿನ ಕಳೆದು ಮನೆಗೆ ತೆರಳುತ್ತಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. ಕುಶಾಲನಗರದ ಬಸ್ ನಿಲ್ದಾಣದಲ್ಲಿ ಕುಳಿತು ಪಬ್‍ಜಿ ಗೇಮ್ ಅಡಿಕೊಂಡು ಯಾರ ಭಯವೂ ಇಲ್ಲದೆ, ಪೊಲೀಸರ ಕಾಟವೂ ಇಲ್ಲ ಹೀಗಾಗಿ ಸಮಯ ಕಳೆದು ಹೋಗುತ್ತಿದ್ದಾರೆ. ಈ ಬಗ್ಗೆ ಸ್ಥಳಿಯರು ಬುದ್ಧಿವಾದ ಹೇಳಿದರೂ ವಿದ್ಯಾರ್ಥಿಗಳು ಕೇಳಲ್ಲ. ಸಂಬಂಧ ಪಟ್ಟ ಇಲಾಖೆಯವರು ಈ ಬಗ್ಗೆ ಗಮನ ಹರಿಸಬೇಕು ಇಲ್ಲದಿದ್ದರೆ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.Sign in to your account
Username or Email Address


Password

 Remember Me


