ಧಾರವಾಡ: ಪ್ರೇಮಿಗಳ ದಿನ ಅನ್ನೋದು ವಿಕೃತಿಯಾಗಿದೆ. ಈ ಆಚರಣೆ ಹಿಂದೆ ದೊಡ್ಡ ಷಡ್ಯಂತ್ರವಿದೆ ಎಂದು ಶ್ರೀರಾಮ ಸೇನೆ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಫೆಬ್ರವರಿ 14 ರಂದು ಪ್ರೇಮಿಗಳ ದಿನಾಚರಣೆ ಹಿನ್ನೆಲೆಯಾಗಿ ಪ್ರಮೋದ್ ಮುತಾಲಿಕ್ ವೀಡಿಯೋ ಸಂದೇಶ ಹರಿಬಿಟ್ಟಿದ್ದಾರೆ. ನಮ್ಮ ದೇಶದಲ್ಲಿ ಶೇ.40 ರಷ್ಟು ಯುವಶಕ್ತಿ ಇದೆ, ಅದು ನಮ್ಮ ದೇಶದ ತಾಕತ್ತು, ಈ ಶಕ್ತಿಯನ್ನು ನಿಷ್ಕ್ರಿಯ ಮಾಡುವ ಕುತಂತ್ರ ನಡೆದಿದೆ ಎಂದು ಹೇಳಿದ್ದಾರೆ. ಪ್ರೇಮಿಗಳ ದಿನಾಚರಣೆ ಮಾಡುವ ಮೂಲಕ ದೇಶವನ್ನು ದುರ್ಬಲ ಮಾಡುವ ಪ್ರಯತ್ನ ನಡೆದಿದೆ. ಈ ಆಚರಣೆಯ ಹಿಂದೆ ವಿದೇಶಿ ಶಕ್ತಿ ಕೈವಾಡ ಇದೆ. ನಾನಾ ಡೇ ಆಚರಣೆಗಳ ಮೂಲಕ ಯುವಶಕ್ತಿ ಹಾಳು ಮಾಡುವ ಷಡ್ಯಂತ್ರ ನಡೆದಿದೆ. ಸರರ್ಕಾರ ವ್ಯಾಲೆಂಟೈನ್ಸ್ ಡೇ ನಿಬರ್ಂಧಿಸಬೇಕು. ಇದರ ಹಿಂದೆ ಸೆಕ್ಸ್, ಡ್ರಗ್ಸ್ ಮಾಫಿಯಾ ಇದೆ. ನಮ್ಮ ಸಂಪ್ರದಾಯವನ್ನು ಹಾಳು ಮಾಡುವ ಸಂಚು ಈ ದಿನಾಚರಣೆ ಹಿಂದಿದೆ. ಫೆಬ್ರವರಿ 14 ರಂದು ಎಲ್ಲರೂ ಮಾತಾ-ಪಿತಾ ಪೂಜೆ ಮಾಡೋಣ ಎಂದು ಕರೆ ಕೊಟ್ಟಿದ್ದಾರೆ.






 Advertisement 




Sign in to your account
Username or Email Address


Password

 Remember Me


