ಬೆಂಗಳೂರು: ಸಲಗ ಟ್ಯಾಟೂ ಹಾಕಿಸಿಕೊಂಡ ತನ್ನ ಅಭಿಮಾನಿಯ ಜೊತೆ ನಟ ದುನಿಯಾ ವಿಜಯ್ ಅವರು ವೀಡಿಯೋ ಕಾಲ್ ಮಾಡಿ ಮಾತನಾಡಿಸಿದ್ದಾರೆ.ಉತ್ತರ ಕರ್ನಾಟಕ ಮೂಲದ ಹನುಮಂತ ಸದ್ಯ ಗೋವಾದ ಕಿರಾಣಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಈತ ದುನಿಯಾ ವಿಜಿಯ ಅಪ್ಪಟ ಅಭಿಮಾನಿಯಾಗಿದ್ದಾನೆ. ವಿಜಯ್ ರಂತೆ ತಂದೆ-ತಾಯಿಯನ್ನ ಆರಾಧಿಸೋಧ್ಯೇಯವನ್ನ ಹೊಂದಿರೋ ಈ ಅಭಿಮಾನಿ, ನೆಚ್ಚಿನ ನಟನ ಸಿನಿಮಾ ಯಶಸ್ವಿಯಾಗಲೆಂದು ಸಲಗ ಟೈಟಲ್ ನ ತನ್ನ ಕೈ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾನೆ.ಈ ವಿಷಯ ತಿಳಿದು ಅಭಿಮಾನಿಗೆ ವಿಜಯ್ ವೀಡಿಯೋ ಕಾಲ್ ಮಾಡಿದ್ದಾರೆ. ತನ್ನ ಆರಾಧ್ಯ ದೈವನ ಕರೆಯಿಂದ ಖುಷಿಗೊಂಡ ಹನುಮಂತ ಆನಂದಭಾಷ್ಪ ಸುರಿಸಿದ್ದಾನೆ.ಇತ್ತ ಟ್ಯಾಟೂ ಕಂಡು ಭಾವುಕರಾದ ವಿಜಯ್, ಹನುಂತನಿಗೆ ವೀಡಿಯೋ ಕರೆ ಮಾಡಿ, ತಮ್ಮ ಅಭಿಮಾನಕ್ಕೆ ಮೂಕನಾಗಿದ್ದೇನೆ ಅಂತ ಕೃತಜ್ಞತೆ ಸಲ್ಲಿದ್ದಾರೆ. ಜೊತೆಗೆ ತಂದೆ-ತಾಯಿಯನ್ನ ಚೆನ್ನಾಗಿ ನೋಡಿಕೊಳ್ಳಿ, ನಿಮಗೆ ಒಳ್ಳೆಯದಾಗುತ್ತೆ ಅಂತ ಹನುಮಂತನಿಗೆ ಶುಭ ಹಾರೈಸಿದ್ದಾರೆ.Sign in to your account
Username or Email Address


Password

 Remember Me


