ಬೆಂಗಳೂರು: ಜೈಲಿನಿಂದ ಹೊರ ಬಂದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್ ಆಗಿರುವ ರಾಗಿಣಿ ಅಭಿಮಾನಿಗಳೊಂದಿಗೆ ಹೆಚ್ಚು ಬೆರೆಯುತ್ತಿದ್ದಾರೆ. ಇದೀಗ ಲೈವ್ ವಿಡಿಯೋ ಮೂಲಕ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದು, ಗಳಗಳನೆ ಅತ್ತಿದ್ದಾರೆ.ಲೈವ್ ವೀಡಿಯೋದಲ್ಲಿ ಮಾತನಾಡಿರುವ ರಾಗಿಣಿ, ಅಭಿಮಾನಿಗಳ ಜೊತೆ ಮಾತನಾಡುತ್ತಲೇ ಕಣ್ಣೀರು ಹಾಕಿದ್ದಾರೆ. ಈ ಸಂದರ್ಭದಲ್ಲಿ ಹಲವರು ಹಲವು ರೀತಿಯ ಕಮೆಂಟ್ ಮಾಡುವ ಮೂಲಕ ಪ್ರಶ್ನೆಗಳನ್ನು ಕೇಳಿದ್ದಾರೆ. ಅನೇಕರು ಕೆಟ್ಟ ಕಮೆಂಟ್‍ಗಳನ್ನು ಸಹ ಮಾಡಿದ್ದು, ಅವುಗಳನ್ನೂ ಸಕಾರಾತ್ಮಕವಾಗಿ ಸ್ವೀಕರಿಸಿ ಸಮಾಧಾನದಿಂದಲೇ ಉತ್ತರಿಸಿದ್ದಾರೆ.ಆ ದಿನಗಳು ತುಂಬಾ ಕಷ್ಟದ್ದಾಗಿತ್ತು, ಕುಟುಂಬದ ಬೆಂಬಲದಿಂದಲೇ ನಾನು ಸ್ಟ್ರಾಂಗ್ ಆಗಿದ್ದೇನೆ. ನಾನು ತುಂಬಾ ಮೌನ ವಹಿಸಿದ್ದೇನೆ. ಆದರೆ ದುರ್ಬಲಗೊಂಡಿಲ್ಲ. ನಿಮ್ಮ ಬಗ್ಗೆ ನಿಮಗೆ ನಂಬಿಕೆ ಇದ್ದರೆ, ನಿಮ್ಮಲ್ಲಿ ಛಲವಿದ್ದರೆ ಯಾರಿಗೂ ಯಾವುದಕ್ಕೂ ಉತ್ತರಿಸಬೇಕಿಲ್ಲ. ಈ ಶಕ್ತಿಯಿಂದಲೇ ನಾನೀಗ ನಿಮ್ಮ ಮುಂದೆ ಬಂದು ಮಾತನಾಡುತ್ತಿದ್ದೇನೆ. 12 ವರ್ಷದಿಂದ ಕನ್ನಡ ಚಿತ್ರರಂಗದಲ್ಲಿ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದೇನೆ ಎಲ್ಲ ರೀತಿಯ ಏಳು ಬೀಳುಗಳನ್ನು ಕಂಡಿದ್ದೇನೆ. ಕಷ್ಟದ ಸಂದರ್ಭಗಳನ್ನು ನಿಭಾಯಿಸುವ ಬಗ್ಗೆ ನಮ್ಮ ತಂದೆ, ತಾಯಿ ನಮಗೆ ಚೆನ್ನಾಗಿ ಹೇಳಿಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.  A post shared by Ragini dwivedi (@rraginidwivedi)ಒಂದು ಸೂಪರ್ ಹಿಟ್ ಫಿಲ್ಮ್ ಬರುತ್ತೆ, ಬಳಿಕ ಥಟ್ ಅಂತ ಮತ್ತೊಂದು ಫಿಲ್ಮ್ ಫ್ಲಾಪ್ ಆಗುತ್ತೆ. ಶೂಟಿಂಗ್ ಮಾಡುವಾಗ ಸಹ ಕೆಲವು ಬಾರಿ ಸೀನ್‍ಗಳು ತುಂಬಾ ಚೆನ್ನಾಗಿ ಬರುತ್ತವೆ. ಇನ್ನೂ ಕೆಲವು ಬಾರಿ ಕೆಟ್ಟದಾಗಿ ಮಾತನಾಡುತ್ತೇವೆ. ಹೀಗಾಗಿ ಗೆದ್ದಾಗ ಹಿಗ್ಗದೆ, ಸೋತಾಗ ಕುಗ್ಗದೆ ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಬೇಕು. ಪ್ರತಿ ದಿನ ಇನ್‍ಸ್ಪಿರೇಶನ್ ಪಡೆಯಬೇಕು. ನಾನು ಇಷ್ಟು ಗಟ್ಟಿಯಾಗಿ ಇರಬೇಕಾದರೆ ನನ್ನ ತಂದೆ, ತಾಯಿಯೇ ಕಾರಣ ಎಂದಿದ್ದಾರೆ.ಕೆಟ್ಟದಾಗಿ ಕಮೆಂಟ್ ಮಾಡಿದರ ಬಗ್ಗೆ ಸಹ ರಾಗಿಣಿ ಮಾತನಾಡಿದ್ದು, ಹೆಣ್ಣು ಮಕ್ಕಳಿಗೆ ಹೆಸರು ಇಡೋದು, ಅವರ ಕುಟುಂಬದ ಬಗ್ಗೆ ಮಾತನಾಡಿದರೆ ನಿಮಗೆ ಯಾವ ರೀತಿಯ ಖುಷಿ ಬರುತ್ತೋ ಗೊತ್ತಿಲ್ಲ. ಆದರೆ ಆ ರೀತಿಯಾದರೂ ನೀವು ಖುಷಿ ಪಟ್ಟಿದ್ದೀರಲ್ಲ ಎಂಬ ಸಂತಸ ನನಗೂ ಇದೇ ಎಂದು ಹೇಳುವ ಮೂಲಕ ಕೆಟ್ಟದಾಗಿ ಕಮೆಂಟ್ ಮಾಡುವವರಿಗೆ ಟಾಂಗ್ ನೀಡಿದ್ದಾರೆ.  A post shared by Ragini dwivedi (@rraginidwivedi)ಈ ವೀಡಿಯೋ ಮಾಡುವುತ್ತಿರುವುದು ನಾನು ಮಾನಸಿಕವಾಗಿ ನೊಂದಿರುವವರಿಗಾಗಿ, ಮೆಂಟಲ್ ಹೆಲ್ತ್ ತುಂಬಾ ಮುಖ್ಯ. ಯಾವುದೇ ರೀತಿಯ ಕಷ್ಟ ಬಂದರೂ ಕುಗ್ಗಬೇಡಿ. ನನಗೂ ಸಹ ಆ ಸಂದರ್ಭದಲ್ಲಿ ತುಂಬಾ ಕಷ್ಟವಿತ್ತು, ನೋವಿತ್ತು. ಪಾಸಿಟಿವಿಟಿ ಜೊತೆಗೆ ಕೆಲವು ಬಾರಿ ನನಗೂ ನಿದ್ದೆ ಬರುತ್ತಿರಲಿಲ್ಲ. ಬಳಿಕ ಮತ್ತೆ ಸ್ಟ್ರಾಂಗ್ ಆಗುತ್ತಿದ್ದೆ. ಮೌನದಿಂದಲೇ ಸ್ಟ್ರಾಂಗ್ ಆಗುತ್ತಿದ್ದೆ. ನೀವು ಯಾವುದೇ ವಿಚಾರದ ಕುರಿತು ಸಫರ್ ಆಗಿದ್ದರೆ, ತಲೆ ಕೆಡಿಸಿಕೊಳ್ಳಬೇಡಿ, ನಿಮಗಾಗಿ, ನಿಮ್ಮವರಿಗಾಗಿ ನೀವು ಸ್ಟ್ರಾಂಗ್ ಆಗಿ ನಿಲ್ಲಬೇಕು ಎಂದು ಅವರು ಅಭಿಮಾನಿಗಳಿಗೆ ಕರೆ ನೀಡಿದ್ದಾರೆ. ಮುಂದೆ ಒಳ್ಳೆ ಸಿನಿಮಾ ಕೊಡುತ್ತೇನೆ ಸ್ವಲ್ಪ ಸಮಯ ಕೊಡಿ, ನಾನು ನಿಮ್ಮನ್ನು ಎಂಟರ್ಟೈನ್ ಮಾಡುತ್ತೇನೆ ಎಂದು ಹೇಳಿದ್ದಾರೆ.Sign in to your account
Username or Email Address


Password

 Remember Me


