ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮೂರು ದಿನಗಳ ಕಾಲ ನಡೆದ ಪಕ್ಷಿ ಗಣತಿ ಮುಕ್ತಾಯವಾಗಿದ್ದು 289 ಪ್ರಬೇಧದ ಪಕ್ಷಿಗಳನ್ನು ಗುರುತಿಸಲಾಗಿದೆ. ಎರಡು ಬಗೆಯ ಅಪರೂಪದ ಪಕ್ಷಿಗಳು ಪತ್ತೆಯಾಗಿವೆ. ಅಲ್ಲದೆ ಇದೇ ಮೊದಲ ಬಾರಿಗೆ ಈ ಅರಣ್ಯದಲ್ಲಿ ಗ್ರೇಟ್‌ ಹಾರ್ನ್‌ಬಿಲ್‌ ಪಕ್ಷಿ ಸಹ ಕಾಣಿಸಿಕೊಂಡಿದೆ.ಕರ್ನಾಟಕ ಪಕ್ಷಿ ಗಣತಿಯಡಿ ಸೇರಿಲ್ಲದ ಲೆಸ್ಸರ್ ಫಿಶ್ ಈಗಲ್ ಹಾಗೂ ಟಾನಿ ಬೆಲ್ಲೀಡ್ ಬ್ಯಾಬ್ಲರ್ ಎಂಬ ಪಕ್ಷಿಗಳು ಸಹ ಕಂಡುಬಂದಿವೆ. 1998 ರಲ್ಲಿ ಬಂಡೀಪುರ ಹುಲಿಸಂರಕ್ಷಿತ ಪ್ರದೇಶದಲ್ಲಿ 123 ಪ್ರಬೇಧದ ಪಕ್ಷಿಗಳನ್ನು ಗುರುತಿಸಿ ದಾಖಲಿಸಲಾಗಿತ್ತು. ಆದರೆ 22 ವರ್ಷಗಳ ನಂತರ ನಡೆದ ಪಕ್ಷಿ ಗಣತಿಯಲ್ಲಿ 289 ಪ್ರಬೇಧದ ಪಕ್ಷಿಗಳು ಕಂಡು ಬಂದಿವೆ.ಕಳೆದ ಮೂರು ದಿನಗಳಿಂದ ಪಕ್ಷಿತಜ್ಞರು, ಪಕ್ಷಿಪ್ರಿಯರು ಸ್ವಯಂಸೇವಕರು ಹಾಗು ಅರಣ್ಯ ಇಲಾಖೆಯ ಸಿಬ್ಬಂದಿ ನಡೆಸಿದ ಪಕ್ಷಿ ಗಣತಿಯಲ್ಲಿ ಕೆಲವು ಅಪರೂಪದ ಹಾಗು ಅಳಿವಿನಂಚಿನಲ್ಲಿರುವ ಪ್ರಬೇಧದ ಪಕ್ಷಿಗಳು ಪತ್ತೆಯಾಗಿದೆ.Sign in to your account
Username or Email Address


Password

 Remember Me


