ಬೆಂಗಳೂರು: ರಾಜ್ಯದಲ್ಲಿಂದು 415 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 322 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಒಟ್ಟು 18,746 ಜನರು ಕೊರೊನಾ ಲಸಿಕೆಯನ್ನ ಪಡೆದುಕೊಂಡಿದ್ದಾರೆ.ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 9,43,627ಕ್ಕೇರಿಕೆಯಾಗಿದ್ರೆ 5,875 ಸಕ್ರಿಯ ಪ್ರಕರಣಗಳ ಪೈಕಿ 141 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಂದು ಕೊರೊನಾದಿಂದ ಮೂವರು ಮೃತಪಟ್ಟಿದ್ದು, ಇದುವರೆಗೂ ಸಾವನ್ನಪ್ಪಿದವರ ಸಂಖ್ಯೆ 12,244ಕ್ಕೇರಿಕೆಯಾಗಿದೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.0.62 ಮತ್ತು ಮರಣ ಪ್ರಮಾಣ ಶೇ.0.72ರಷ್ಟಿದೆ. ಇಂದು 66,199 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು.ಯಾವ ಜಿಲ್ಲೆಯಲ್ಲಿ ಎಷ್ಟು ಜನಕ್ಕೆ ಕೊರೊನಾ ಲಸಿಕೆ?: 
ಬಾಗಲಕೋಟೆ 234, ಬಳ್ಳಾರಿ 982, ಬೆಳಗಾವಿ 1,801, ಬೆಂಗಳೂರು ಗ್ರಾಮಾಂತರ 144, ಬೆಂಗಳೂರು ನಗರ 2,052, ಬೀದರ್ 242, ಚಾಮರಾಜನಗರ 172, ಚಿಕ್ಕಬಳ್ಳಾಪುರ 239, ಚಿಕ್ಕಮಗಳೂರು 587, ಚಿತ್ರದುರ್ಗ 420, ದಕ್ಷಿಣ ಕನ್ನಡ 1,663, ದಾವಣಗೆರೆ 324, ಧಾರವಾಡ 330, ಗದಗ 730, ಹಾಸನ 711, ಹಾವೇರಿ 261, ಕಲಬುರಗಿ 738, ಕೊಡಗು 299, ಕೋಲಾರ 638, ಕೊಪ್ಪಳ 654, ಮಂಡ್ಯ 264, ಮೈಸೂರು 939, ರಾಯಚೂರು 333, ರಾಮನಗರ 135, ಶಿವಮೊಗ್ಗ 369, ತುಮಕೂರು 1,760, ಉಡುಪಿ 134, ಉತ್ತರ ಕನ್ನಡ 789, ವಿಜಯಪುರ 618 ಮತ್ತು ಯಾದಗಿರಿಯಲ್ಲಿ 184 ಜನರು ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ.ಕೊರೊನಾ ಪ್ರಕರಣಗಳು: 
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 0, ಬಳ್ಳಾರಿ 1, ಬೆಳಗಾವಿ 17, ಬೆಂಗಳೂರು ಗ್ರಾಮಾಂತರ 6, ಬೆಂಗಳೂರು ನಗರ 208, ಬೀದರ್ 8, ಚಾಮರಾಜನಗರ 3, ಚಿಕ್ಕಬಳ್ಳಾಪುರ 6, ಚಿಕ್ಕಮಗಳೂರು 3, ಚಿತ್ರದುರ್ಗ 11, ದಕ್ಷಿಣ ಕನ್ನಡ 16, ದಾವಣಗೆರೆ 9, ಧಾರವಾಡ 2, ಗದಗ 2, ಹಾಸನ 10, ಹಾವೇರಿ 1, ಕಲಬುರಗಿ 14, ಕೊಡಗು 11, ಕೋಲಾರ 2, ಕೊಪ್ಪಳ 0, ಮಂಡ್ಯ 2, ಮೈಸೂರು 45, ರಾಯಚೂರು 1, ರಾಮನಗರ 1, ಶಿವಮೊಗ್ಗ 6, ತುಮಕೂರು 17, ಉಡುಪಿ 6, ಉತ್ತರ ಕನ್ನಡ 3, ವಿಜಯಪುರ 4 ಮತ್ತು ಯಾದಗಿರಿಯಲ್ಲಿ 0 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.Sign in to your account
Username or Email Address


Password

 Remember Me


