ಕಾರವಾರ: ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಸವಾರರನ್ನು ದರೋಡೆ ಮಾಡಿದ್ದ, ಮೂವರು ಆರೋಪಿಗಳನ್ನು ಯಲ್ಲಾಪುರ ಪೊಲೀಸರು ಇಂದು ಬೆಳಗಿನ ಜಾವ ಬಂಧಿಸಿದ್ದಾರೆ.ಬಂಧಿತರು ಕಲಘಟಗಿಯ ಮೊಹಮ್ಮದ್ ಸಾಬ್ (37), ಶಿವಮೊಗ್ಗ ಜಿಲ್ಲೆ ಸಾಗರದ ಆಸೀಫ್ ಮೊಹಮ್ಮದ್ ಇಲಿಯಾಸ್ (37) ಮತ್ತು ಅತಾವುಲ್ಲಾ ಇಸ್ಮಾಯಿಸಾಬ್ ಮಕಾಂದರ (36) ಆಗಿದ್ದಾರೆ.ಫೆಬ್ರುವರಿ 9ರ ರಾತ್ರಿ ಹಾವೇರಿ ಮೂಲದ ಕೃಷ್ಣಾಜಿ ಬೈಕ್‍ನಲ್ಲಿ ಹೋಗುತ್ತಿದ್ದರು. ಈ ವೇಳೆ ದರೋಡೆಕೊರರು ಸವಾರನನ್ನು ಮಲ್ಲಿಕ್ ಹೋಟೇಲ್ ಬಳಿ ಅಡ್ಡಗಟ್ಟಿ, ಹಲ್ಲೆ ನಡೆಸಿ ಪಿಸ್ತೂಲ್ ತೋರಿಸಿ ಹಣ, ಆಭರಣ ದೋಚಿದ್ದರು. ಕೃಷ್ಣಾಜಿ ಯವರು ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ದರೋಡೆ ಮಾಡಿದ ಮೂರುಜನ ಆರೋಪಿಗಳನ್ನು ಬಂಧಿಸಲಾಗಿದೆ.






 Advertisement 




Sign in to your account
Username or Email Address


Password

 Remember Me


