ಧಾರವಾಡ: ಆಟೋ ತೊಳಯಲು ಹೋಗಿ ಕಾಲು ಜಾರಿ ಕೆರೆಗೆ ಬಿದ್ದು ಆಟೋ ಚಾಲಕರೊಬ್ಬರು ಸಾವನ್ನಪ್ಪಿದ ಘಟನೆ ಧಾರವಾಡದ ಕೆಲಗೇರಿ ಕೆರೆಯಲ್ಲಿ ನಡೆದಿದೆ.ಮೃತ ಆಟೋಚಾಲಕನನ್ನು ಲಕ್ಷ್ಮಣ್ ಡೊಳ್ಳನ್ನವರ್ ಎಂದು ಗುರುತಿಸಲಾಗಿದೆ. ಆಟೋವನ್ನು ಕೆರೆಯ ದಂಡೆ ಮೇಲೆ ನಿಲ್ಲಿಸಿ ಆಟೋ ಹಿಂದಿನ ಭಾಗ ತೊಳೆಯಲು ಹೋದಾಗ ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾರೆ.ಸ್ಥಳದಲ್ಲಿದ್ದ ಕೆಲವರು ಇದನ್ನ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಬಂದು ಶವ ಹೊರಗೆ ತೆಗೆದಿದ್ದಾರೆ. ಉಪನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಮೃತ ಲಕ್ಷ್ಮಣ್ ಧಾರವಾಡ ಕ್ಯಾರಕೊಪ್ಪ ಗ್ರಾಮದ ಆನಂದನಗರ ನಿವಾಸಿಯಾಗಿದ್ದು, ನಗರದ ದಾಸನಕೊಪ್ಪ ಆಟೋ ಸ್ಟ್ಯಾಂಡನಲ್ಲಿ ಆಟೋ ನಿಲ್ಲಿಸುತ್ತಿದ್ದರು.


 Advertisement 







 Advertisement 




Sign in to your account
Username or Email Address


Password

 Remember Me


