ಬೆಂಗಳೂರು: ಹಲವು ದಿನಗಳ ಬಳಿಕ ನಟಿ ಮೇಘನಾ ರಾಜ್ ತನ್ನ ಸ್ನೇಹಿತರೊಂದಿಗೆ ಕಾಲ ಕಳೆದಿದ್ದಾರೆ. ಈ ಕುರಿತಂತೆ ಮೇಘನಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆ ಸ್ಟೋರಿಯಾಗಿ ಒಂದೆರಡು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಬಹುಶಃ ಜ್ಯೂನಿಯರ್ ಚಿರು ಜನಿಸಿದ ನಂತರ ಇದು ಮೇಘನಾ ರಾಜ್‍ರ ಮೊದಲ ಔಟಿಂಗ್ ಇರಬಹುದು.ಮೇಘನಾ ರಾಜ್ ಪತಿ ಚಿರಂಜೀವಿ ಸರ್ಜಾ ಹೃದಯಾಘಾತದಿಂದ 2020ರ ಜೂನ್ 7 ರಂದು ಕೊನೆಯುಸಿರೆಳೆದರು. ಬಳಿಕ ಗಂಡು ಮಗುವಿಗೆ ಜನನ ನೀಡಿದ ಮೇಘನಾ, ಆಗಾಗ ಪತಿ ಜೊತೆಗಿರುವ ಹಳೆಯ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುವುದರ ಮೂಲಕ ಚಿರುವನ್ನು ನೆನಪಿಸಿಕೊಳ್ಳುತ್ತಿದ್ದರು.ಇದೀಗ ಮೇಘನಾ ಹಲವು ದಿನಗಳ ಬಳಿಕ ಕಳೆದ ವಾರಾಂತ್ಯದಲ್ಲಿ ಬೆಂಗಳೂರಿನ ಕೆಫೆಯೊಂದರಲ್ಲಿ ಸ್ನೇಹಿತರೊಂದಿಗೆ ಎಂಜಾಯ್ ಮಾಡುತ್ತಾ ಅದ್ಭುತ ಕ್ಷಣಗಳನ್ನು ಕಳೆದಿದ್ದಾರೆ. ಕೆಫೆಯಲ್ಲಿ ಮೇಘನಾ ಜೊತೆ ನಟ ಹಾಗೂ ನಿರ್ದೇಶಕ ಪನ್ನಗಭರಣ ಹಾಗೂ ಅವರ ಪತ್ನಿ ನಿಕಿತಾ ಭರಣ, ನಟ ಪ್ರಜ್ವಲ್ ದೇವರಾಜ್, ಪತ್ನಿ ರಾಗಿಣಿ ಚಂದ್ರನ್ ಸೇರಿದಂತೆ ಕೆಲವು ಸ್ನೇಹಿತರು ಮತ್ತು ಕುಟುಂಬಸ್ಥರು ಕಾಣಿಸಿಕೊಂಡಿದ್ದಾರೆ. ಸದ್ಯ ಈ ಫೋಟೋವನ್ನು ಮೇಘನಾ ತಮ್ಮ ಇನ್‍ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆಈ ಮುನ್ನ ಜನವರಿ 31 ಜೂನಿಯರ್ ಚಿರುಗೆ ಮೊದಲ ಬಾರಿಗೆ ಪೋಲಿಯೋ ಲಸಿಕೆ ಹಾಕಿಸಿರುವ ಕೈ ಉಗುರಿನ ಮೇಲೆ ಇಂಕ್ ಆಗಿದ್ದ ಫೋಟೋವನ್ನು ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಜೊತೆಗೆ ಪೋಲಿಯೋ ವಿರುದ್ಧ ಹೋರಾಡಲು ಮಕ್ಕಳಿಗೆ ಲಸಿಕೆ ಹಾಕಿಸಿ ಎಂದು ಕರೆ ನೀಡಿದರು.  A post shared by Meghana Raj Sarja (@megsraj)‘ಬೇಬಿ ಸಿ’ ಮೊದಲ ಬಾರಿಗೆ ತನ್ನ ಕೈ ಬೆರಳಿನ ಉಗುರಿಗೆ ಶಾಯಿ ಹಾಕಿಕೊಂಡಿದ್ದಾನೆ. ಕೇವಲ ಕೆಲವು ಡ್ರಾಪ್ಸ್ ಪೋಲಿಯೋ ಲಸಿಕೆ ಹಾಕಿಸುವ ಮೂಲಕ ಮಕ್ಕಳನ್ನು ರಕ್ಷಿಸಿ ಹಾಗೂ ದೇಶವನ್ನು ಪೋಲಿಯೋ ಮುಕ್ತಗೊಳಿಸಿ. ಆರೋಗ್ಯಕರವಾಗಿರಿ, ಚೆನ್ನಾಗಿರಿ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದರು.Sign in to your account
Username or Email Address


Password

 Remember Me


