ಮಂಡ್ಯ: ಸಕ್ಕರೆ ನಾಡಿನಲ್ಲಿ ಟಿಕೆಟ್ ಫೈಟ್ ಶುರುವಾಗಿದೆ. 2023ರ ಚುನಾವಣೆಗೆ ನಾಗಮಂಗಲ ಕ್ಷೇತ್ರದ ಟಿಕೆಟ್‍ಗಾಗಿ ಸಮರ ಆರಂಭವಾಗಿದ್ದು, ಹಾಲಿ ಶಾಸಕ, ಮಾಜಿ ಸಂಸದರ ನಡುವೆ ಪೈಪೋಟಿ ಶುರುವಾಗಿದೆ. ನಾಗಮಂಗಲದಲ್ಲಿ ಎಲೆಕ್ಷನ್ ತಯಾರಿ ಆರಂಭಿಸಿರುವ ಶಿವರಾಮೇ ಗೌಡ, ಟಿಕೆಟ್ ನಂದೇ, ನೆಕ್ಸ್ಟ್ ಎಂಎಲ್‍ಎ ನಾನೇ ಎಂದು ಗುಡುಗಿದ್ದಾರೆ. ಈ ಮೂಲಕ ಶಾಸಕ ಸುರೇಶ್ ಗೌಡ ವಿರುದ್ಧ ಮಾಜಿ ಸಂಸದರು ತೊಡೆತಟ್ಟಿದ್ದಾರೆ.ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಂಸದ, ಈ ಬಾರಿ ನಾಗಮಂಗಲದಲ್ಲಿ ನಂದೇ ಆಟ. ಟಿಕೆಟ್ ತೆಗೆದುಕೊಂಡು ನೋಡಿದ್ದೀನಿ, ತೆಗೆದುಕೊಳ್ಳದೆಯೂ ನೋಡಿದ್ದೀನಿ. ಚುನಾವಣೆ ಸಿದ್ದತೆ ಪ್ರಾರಂಭ ಮಾಡಿದ್ದೇವೆ. ನಾವು ಎಷ್ಟೇ ಹಳಬರು ಇದ್ದರೂ ಜನ ಸಂಪರ್ಕದಲ್ಲೆ ಇರಬೇಕು. ಜೆಡಿಎಸ್ ನಲ್ಲಿದ್ದೇನೆ, ಜೆಡಿಎಸ್ ಅಭ್ಯರ್ಥಿಯಾಗುತ್ತೇನೆ ಎಂದು ಶಿವರಾಮೇ ಗೌಡ ಹೇಳಿದ್ದಾರೆ.ಹಾಲಿ ಶಾಸಕ ಸುರೇಶ್ ಗೌಡರನ್ನ ಲೋಕಸಭೆಗೆ ಕಳಿಸೋಣ. ಅವರು ತುಂಬಾ ಚೆನ್ನಾಗಿ ಇಂಗ್ಲಿಷ್-ಹಿಂದಿ ಮಾತನಾಡುತ್ತಾರೆ. ಸುರೇಶ್ ಗೌಡರು ಒಪ್ಪದಿದ್ರೇ ಜನರೇನು ದಡ್ಡರಾ..?, ನಮ್ಮ ನಾಯಕರು ದಡ್ಡರಾ..? ಸುರೇಶ್ ಗೌಡರಿಗೆ ಟಿಕೆಟ್ ಎಂದು ಎಚ್‍ಡಿಡಿ, ಎಚ್‍ಡಿಕೆ ಮಾತುಕೊಟ್ಟಿದ್ದಾರಾ ಎಂದು ಪ್ರಶ್ನಿಸುವ ಮೂಲಕ ಹಾಲಿ ಶಾಸಕ ಸುರೇಶ್‍ಗೌಡಗೆ ಶಿವರಾಮೇಗೌಡ ಟಕ್ಕರ್ ಕೊಟ್ಟಿದ್ದಾರೆ.Sign in to your account
Username or Email Address


Password

 Remember Me


