ಹಾವೇರಿ: ಹದಿನೇಳು ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಮರಳಿ ಹುಟ್ಟೂರಿಗೆ ಆಗಮಿಸಿದ ನಿವೃತ್ತ ಯೋಧನಿಗೆ ಗ್ರಾಮದ ಜನರು ಅದ್ಧೂರಿಯಾಗಿ ಸ್ವಾಗತ ಮಾಡಿ ಬರಮಾಡಿಕೊಂಡಿದ್ದಾರೆ.ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಹನುಮಾಪುರ ಗ್ರಾಮದ ನೂಲೇಶ ಲಮಾಣಿ, ಹದಿನೇಳು ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ದೇಶ ಸೇವೆ ಮಾಡಿದ್ದಾರೆ. ಇದೀಗ ನಿವೃತ್ತಿಯಾಗಿ ಊರಿಗೆ ಮರಳಿದ್ದಾರೆ. ಊರಿಗೆ ಬರುತ್ತಿದ್ದಂತೆ, ಗ್ರಾಮದ ಜನರು ತೆರೆದ ವಾಹನದಲ್ಲಿ ನಿವೃತ್ತ ಯೋಧನನ್ನು ಮೆರವಣಿಗೆ ಮಾಡಿ ಅದ್ದೂರಿಯಾಗಿ ಗೌರವ ಸೂಚಿಸಿದ್ದಾರೆ.ಗ್ರಾಮದ ಯುವಕರು ಬೈಕ್ ರ್ಯಾಲಿ ನಡೆಸುವ ಮೂಲಕ ನಿವೃತ್ತ ಯೋಧ ನೂಲೇಶ ಅವರನ್ನು ಬರಮಾಡಿಕೊಂಡರೆ, ರಾಣೇಬೆನ್ನೂರು ನಗರಕ್ಕೆ ಬರುತ್ತಿದ್ದಂತೆ ಕುಟುಂಬದವರು ಹಾಗೂ ಊರವರು ಹೂಮಾಲೆ ಹಾಕಿ ಸ್ವಾಗತ ಮಾಡಿ, ಇಷ್ಟುವರ್ಷದ ಸೇವೆಗಾಗಿ ಧನ್ಯವಾದ ಸಲ್ಲಿಸಿದರು.






 Advertisement 




Sign in to your account
Username or Email Address


Password

 Remember Me


