ಚಿಕ್ಕಬಳ್ಳಾಪುರ: ಸ್ಕೂಟಿಯಲ್ಲಿ ಹೋಗುತ್ತಿದ್ದವನನ್ನು ಹಿಂಬಾಲಿಸಿ ಹಿಂದೆಯಿಂದಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.ಜಿಲ್ಲೆಯ ಗುಡಿಬಂಡೆ ತಾಲೂಕಿನ ಭೋಗೇಪಲ್ಲಿ ಬಳಿ ಘಟನೆ ನಡೆದಿದೆ. ಸುಮಾರು 45 ವರ್ಷದ ನರಸಿಂಹಪ್ಪ ಕೊಲೆಯಾದ ವ್ಯಕ್ತಿ. ಭೋಗೇಪಲ್ಲಿಯಿಂದ ವರದಯ್ಯಗಾರಪಲ್ಲಿಗೆ ತೆರಳುವ ಮಾರ್ಗ ಮಧ್ಯೆ ಈ ಕೊಲೆ ನಡೆದಿದೆ.ಸ್ಕೂಟಿಯಲ್ಲಿ ತೆರಳುತ್ತಿದ್ದ ನರಸಿಂಹಯ್ಯನನ್ನು ಹಿಂಬಾಲಿಸಿದ ಆಗಂತುಕರು, ಹಿಂಬದಿಯಿಂದಲೇ ಮಾರಕಾಸ್ತ್ರದಿಂದ ನರಸಿಂಹಯ್ಯ ತಲೆಗೆ ಬಲವಾಗಿ ಹೊಡೆದಿದ್ದು, ತಲೆ ಎರಡು ಹೋಳಿನ ತರ ಆಗಿದೆ. ನರಸಿಂಹಯ್ಯ ಸ್ಕೂಟಿಯ ಮೇಲೆ ಕುಸಿದುಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಈ ಸಂಬಂಧ ಗುಡಿಬಂಡೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಕೊಲೆಗೆ ಗ್ರಾಮ ಪಂಚಾಯಿತಿ ಚುನಾವಣಾ ವೈಷಮ್ಯವೇ ಕಾರಣ ಎಂಬ ವಾಸನೆ ಬಡಿದಿದ್ದು, ಪೊಲೀಸರ ತನಿಖೆಯಿಂದ ಕೊಲೆಗಾರರು ಪತ್ತೆಯಾಗಬೇಕಿದೆ.Sign in to your account
Username or Email Address


Password

 Remember Me


