ಬೆಂಗಳೂರು: ಬರೋಬ್ಬರಿ 20 ಲಕ್ಷ ರೂ. ಹಣ ಪಡೆಯುವ ವೇಳೆ ಬಿಬಿಎಂಪಿ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ.ನಗರದ ಬೊಮ್ಮನಹಳ್ಳಿಯ ಯೋಜನೆ ವಿಭಾಗದ ಸಹಾಯಕ ನಿರ್ದೇಶಕ ದೇವೇಂದ್ರಪ್ಪ 20 ಲಕ್ಷ ರೂ. ಹಣ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ. ಕಟ್ಟಡವೊಂದಕ್ಕೆ ಓಸಿ ನೀಡಲು 40 ಲಕ್ಷ ಲಂಚ ಕೇಳಿದ್ದ ದೇವೇಂದ್ರಪ್ಪ, ಈ ಪೈಕಿ 20 ಲಕ್ಷ ರೂ. ಮುಂಗಡ ಹಣ ಪಡೆಯುವ ವೇಳೆ ಎಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಹಣ ನೀಡುವಾಗ ಮಾತ್ರವಲ್ಲದೆ, ಬಳಿಕ ಕಾರ್ ಪರಿಶೀಲನೆ ನಡೆಸಿದಾಗ ಸಹ ಕಾರಿನಲ್ಲಿ ಮತ್ತೆ 8 ಲಕ್ಷ ರೂ. ಸಿಕ್ಕಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಎಸಿಬಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ಕೋಟ್ಯಧೀಶ ಅಧಿಕಾರಿಗಳನ್ನು ಸಹ ಎಸಿಬಿ ಅಧಿಕಾರಿಗಳು ಬಲೆಗೆ ಕೆಡವಿದ್ದಾರೆ. ಇದರ ಬೆನ್ನಲ್ಲೇ ಇದೀಗ ಈ ಪ್ರಕರಣ ಬೆಳಕಿಗೆ ಬಂದಿದೆ.Sign in to your account
Username or Email Address


Password

 Remember Me


