ಬೆಂಗಳೂರು: ಸಿದ್ದರಾಮಯ್ಯ ಸುಳ್ಳಿನ ಕಂತೆ, ಚುನಾಯಿತ ಸರ್ಕಾರ ಅಂತೆಲ್ಲಾ ಎಂದು ಟೀಕೆ ಮಾಡಿದ್ದಾರೆ. ಅವರಿಂದ ಅಭಿವೃದ್ಧಿ ಕುರಿತಾಗಿ ಮಾತ್ರ ಟೀಕೆ ಬಗ್ಗೆ ನಿರೀಕ್ಷೆ ಮಾಡಿದ್ದೆ. ಆದರೆ ಅವರು ಸರ್ಕಾರದ ಬಗ್ಗೆ ಮಾತಾಡಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಮುಖ್ಯಮಂತ್ರಿ ಬಿಎಸ್‍ವೈ ಕಿಡಿಕಾರಿದ್ದಾರೆ.ವಿಧಾನಸಭಾ ಕಲಾಪದ ವೇಳೆ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿ ಯಾವ ರೀತಿ ಆಡಳಿತ ನಡೆಯಿತು ಎಂದು ನಾನು ಹೇಳಬೇಕಿಲ್ಲ. ಆದರೆ ಕುಮಾರಸ್ವಾಮಿ ಕ್ಲರ್ಕ್ ಆಗಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಇಲ್ಲದೆ ಇದ್ದರೂ ಜೆಡಿಎಸ್ ಜೊತೆ ಕಾಂಗ್ರೆಸ್ ಸರ್ಕಾರ ಮಾಡಿದ್ರು. ಸಿದ್ದರಾಮಯು ಸರ್ಕಾರದ ಬಗ್ಗೆ ಮಾತನಾಡಿದ್ದಾರೆ. ನಾನು ಅನಿವಾರ್ಯ ಈ ಬಗ್ಗೆ ಮಾತಾಡಬೇಕಾಗಿದೆ ಎಂದು ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟಿದ್ದಾರೆ.ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಕ್ಲರ್ಕ್ ಆಗಿ ಕೆಲಸ ಮಾಡಿದ್ದಾರೆ. ಅಲ್ಲದೇ ಅನೇಕ ಕಿರುಕುಳದಿಂದ ನಾನು ತೊಂದರೆ ಅನುಭವಿಸಿದ್ದೆ ಎಂದು ಕುಮಾರಸ್ವಾಮಿ ಹೇಳಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಇಲ್ಲದೆ ಇದ್ದರು ಜೆಡಿಎಸ್ ಜೊತೆ ಕಾಂಗ್ರೆಸ್ ಸರ್ಕಾರ ಮಾಡಿದ್ದರು. ಬಿಜೆಪಿಗೆ ಅಧಿಕಾರ ಸಿಗಬಾರದು ಎಂಬ ಕಾರಣಕ್ಕೆ ಸರ್ಕಾರ ಮಾಡಿದ್ರು. ಆದರೆ ಕೊನೆಗೆ ಕುಮಾರಸ್ವಾಮಿಯವರಿಗೆ ಅಧಿಕಾರ ಮಾಡಲು ಬಿಡದೆ ಎಷ್ಟು ತೊಂದರೆ ಕೊಟ್ರು ಎಂಬುದನ್ನು ನಾವು ನೋಡಿದ್ದೇವೆ ಎಂದು ಕಿಡಿಕಾರಿದ್ದಾರೆ.ರೈತ ಮತ್ತೆ ನೇಕಾರ ನಮ್ಮ ಎರಡು ಕಣ್ಣುಗಳು ಇದ್ದಂತೆ. ನೇಕಾರರ ಸಾಲ ಮನ್ನಾ ಮಾಡಿದ್ದೇವೆ. ನೇಕಾರ್ ಸಮ್ಮಾನ್ ಯೋಜನೆ ಗೆ ಚಾಲನೆಗೆ ಸವಾಲುಗಳನ್ನು ಎದುರಿಸೋಕೆ ನನಗೆ ಎಲ್ಲಿಲ್ಲದ ಉತ್ಸಾಹ ಸವಾಲುಗಳೇ ನನ್ನನ್ನು ಗಟ್ಟಿಗೊಳಿಸ್ತಿದೆ. ಹಲವು ವರ್ಷಗಳಿಂದ ಹಲವು ಸವಾಲು ಎದುರಿಸಿದ್ದೇನೆ. ಪ್ರತಿಯೊಂದು ಸವಾಲು ಸ್ವಯಂ ಶಕ್ತಿಯಿಂದ ಎದುರಿಸಿಕೊಂಡು ಬಂದಿದ್ದೇನೆ. ಅಧಿಕಾರ ಸಿಕ್ಕಾಗ, ಹಳೆಯದ್ದನ್ನೆಲ್ಲಾ ಮರೆತು ದ್ವೇಷದ ರಾಜಕಾರಣ ಮರೆತು, ಒಳ್ಳೆಯದನ್ನು ಮಾಡಬೇಕು ಎಂಬುದು ರಾಜಧರ್ಮ ಎಂದು ನಾನು ಭಾವಿಸಿದ್ದೇನೆ ಎಂದಿದ್ದಾರೆ.ಸರ್ಕಾರ ರಚನೆ ವೇಳೆ ನಾನು ಮಂತ್ರಿ ಮಂಡಲ ಮಾಡೋಕೆ ಆಗಿರಲಿಲ್ಲ. ಅವಾಗ ರಾಜ್ಯದಲ್ಲಿ ಭೀಕರ ನೆರೆ ಹಾವಳಿ ಉಂಟಾಗಿತ್ತು. ಆದರೂ ನಾನೊಬ್ಬನೇ ಓಡಾಡಿ ಪ್ರವಾಹ ಪರಿಹಾರ ಕಾರ್ಯಗಳನ್ನು ದೇವರು ಮೆಚ್ಚುವ ರೀತಿ ಕೆಲಸ ಮಾಡಿದ್ದೇನೆ. ನಾನು ಧೃತಿಗೆಡಲಿಲ್ಲ, ನೆರೆ ಸಂತ್ರಸ್ತರ ನೆರವಿಗೆ ಪ್ರಾಮಾಣಿಕ ಕೆಲಸ ಮಾಡಿದ್ದೇನೆ. 1.33 ಲಕ್ಷ ಮನೆಗಳು ಕುಸಿದು ಹೋದವು, ಜನರಿಗೆ ಎಲ್ಲಾ ರೀತಿಯ ರಕ್ಷಣೆ ಕೊಡಲಾಗಿದೆ ಎಂದು ಹೇಳಿದ್ದಾರೆ.






 Advertisement 




Sign in to your account
Username or Email Address


Password

 Remember Me


