ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಇನ್ ಸ್ಟಾಗ್ರಾಮ್ ಖಾತೆಯ ಸ್ಟೋರಿಯಾಗಿ ಬಾಲ್ಯದ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋದಲ್ಲಿ ಮೇಘನಾ ತಮ್ಮ ತಾಯಿ ಪ್ರಮೀಳಾ ಜೋಷಾಯ್ ಜೊತೆ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ ಮೇಘನಾ ತಂದೆ ಸುಂದರ್ ರಾಜ್ ಈ ಫೋಟೋವನ್ನು ಕ್ಲಿಕ್ಕಿಸಿದ್ದಾರೆ. ಆಗಾಗ ಇನ್‍ಸ್ಟಾಗ್ರಾಮ್ ಖಾತೆ ತೆರೆದು ಅಭಿಮಾನಿಗಳನ್ನು ಮತ್ತು ಪತಿ ಚಿರಂಜೀವಿ ಸರ್ಜಾ ಫೋಟೋ ನೋಡುತ್ತಿದ್ದ ಮೇಘನಾ ರಾಜ್ ಈ ಬಾರಿ ಇನ್ ಸ್ಟಾಗ್ರಾಮ್ ಸ್ಟೋರಿಯಾಗಿ ತಮ್ಮ ಬಾಲ್ಯದ ಫೋಟೋವನ್ನು ಹಾಕಿದ್ದಾರೆ. ಈ ಫೋಟೋವನ್ನು ವೀಕ್ಷಿಸಿದ ನಂತರ ಮೇಘನಾ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುವುದರ ಜೊತೆಗೆ ಹಾಸ್ಯಮಯವಾದ ಕ್ಯಾಪ್ಷನ್ ಕೂಡ ಹಾಕಿಕೊಂಡಿದ್ದಾರೆ. ಈ ಫೋಟೋನಲ್ಲಿ ಮೇಘನಾ ಬಾಬ್ ಕಟ್ ಮಾಡಿಸಿಕೊಂಡಿದ್ದಾರೆ. ಟಾಪ್ ಟೂ ಬಾಟಂ ಕಪ್ಪು ಬಣ್ಣದ ಉಡುಪು ಧರಿಸಿರುವ ಮೇಘನಾ ಪ್ರಮೀಳಾ ಜೋಷಾಯ್ ಅವರ ಪಕ್ಕ ನಡೆದುಕೊಂಡು ಬರುತ್ತಿದ್ದಾರೆ. ಈ ಫೋಟೋವನ್ನು ಶೇರ್ ಮಾಡಿಕೊಂಡಿರುವ ಮೇಘನಾ ನನ್ನ ತಂದೆ ಛಾಯಾಗ್ರಹಕರಾಗಿದ್ದಾಗ ನಾನು ಫೋಟೋಗಳಿಗೆ ಪೋಸ್ ನೀಡುವಂತೆ ನಟಿಸುತ್ತಿದ್ದೆ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.ಅಲ್ಲದೆ ಫೆಬ್ರವರಿ 2ರಂದು ಮೇಘನಾ ತಂದೆ ಸುಂದರ್ ರಾಜ್ ಪ್ರೀತಿಯಿಂದ ತಮ್ಮ ಕೆನ್ನೆಗೆ ಚುಂಬಿಸುತ್ತಿರುವ ಫೋಟೋವನ್ನು ಶೇರ್ ಮಾಡಿಕೊಂಡಿಕೊಳ್ಳುವುದರ ಮೂಲಕ ಸುಂದರ್ ರಾಜ್‍ಗೆ ಜನ್ಮ ದಿನದ ಶುಭಾಶಯವನ್ನು ಕೋರಿದ್ದರು.  A post shared by Meghana Raj Sarja (@megsraj)ಜೊತೆಗೆ ಪ್ರೀತಿಯ ಅಪ್ಪ ನಾನು ಅವಲಂಬಿತವಾಗಿರುವ ಏಕೈಕ ಭುಜ ಅಂದರೆ ಅದು ನಿಮ್ಮದು. ಈ ವಿಚಾರವನ್ನು ನಿಮ್ಮ ಹುಟ್ಟುಹಬ್ಬದ ದಿನ ನಾನು ಜಗತ್ತಿಗೆ ಹೇಳಲು ಬಯಸುತ್ತೇನೆ. ನೀವು ಒಂದು ಸಣ್ಣ ಹೆಣ್ಣು ಮಗುವಿದ್ದಂತೆ ನಾನು ನಿಮ್ಮನ್ನು ಯಾವಾಗಲೂ ಪ್ರೀತಿಸುತ್ತೇನೆ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದರು.Sign in to your account
Username or Email Address


Password

 Remember Me


