ಬೆಂಗಳೂರು: ಇಂದು ಕರ್ನಾಟಕದಲ್ಲಿ 474 ಮಂದಿಗೆ ಕೊರೊನಾ ಬಂದಿದ್ದು, ಆಸ್ಪತ್ರೆಯಿಂದ 470 ಜನ ಡಿಸ್ಚಾರ್ಜ್ ಆಗಿದ್ದಾರೆ. ಇಬ್ಬರು ಕೊರೊನಾಗೆ ಬಲಿಯಾಗಿದ್ದಾರೆ.ಇಂದು ಒಟ್ಟು 39,169 ಮಂದಿಗೆ ಲಸಿಕೆ ನೀಡಲು ಯೋಜನೆ ಹಾಕಿಕೊಳ್ಳಲಾಗಿತ್ತು. ಈ ಪೈಕಿ 11,321 (ಶೇ.29)ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ.ಇಂದು ಗದಗ, ಹಾವೇರಿ, ಕೊಪ್ಪಳ, ರಾಮನಗರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ದಾಖಲಾಗಿವೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9,41,070ಕ್ಕೆ ಏರಿಕೆ ಆಗಿದೆ. ಈ ಪೈಕಿ 9,22,907 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 5,917 ಸಕ್ರಿಯ ಪ್ರಕರಣಗಳಿವೆ.ಒಟ್ಟು ಇಲ್ಲಿಯವರೆಗೆ 12,227 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ 146 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 4,882 ಆಂಟಿಜನ್ ಟೆಸ್ಟ್, 70,960 ಆರ್‍ಟಿ ಪಿಸಿಆರ್ ಸೇರಿದಂತೆ ಒಟ್ಟು 75,842 ಪರೀಕ್ಷೆ ಮಾಡಲಾಗಿದೆ.ಎಂದಿನಂತೆ ಬೆಂಗಳೂರು ನಗರದಲ್ಲಿ 263 ಮಂದಿಗೆ ಸೋಂಕು ಬಂದಿದೆ. ದಕ್ಷಿಣ ಕನ್ನಡ 42, ಬೀದರ್ 18, ಹಾಸನ ಹಾಗೂ ಕಲಬುರಗಿಯಲ್ಲಿ ತಲಾ 14 ಮತ್ತು ಮೈಸೂರಿನಲ್ಲಿ 12 ಮಂದಿಗೆ ಸೋಂಕು ಬಂದಿದೆ.ಬೆಂಗಳೂರು ನಗರದಲ್ಲಿ 72, ಕಲಬುರಗಿ 13, ದಕ್ಷಿಣ ಕನ್ನಡ 6, ಮೈಸೂರು ಹಾಗೂ ಉಡುಪಿಯಲ್ಲಿ ತಲಾ 5 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.Sign in to your account
Username or Email Address


Password

 Remember Me


