ಕೊಪ್ಪಳ: ಜೀವ ಇರುವಾಗಲೇ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಹೇಳಿ ವೈದರು ಎಡವಟ್ಟು ಮಾಡಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.ಕೊಪ್ಪಳದ ಕೆ ಎಸ್ ಆಸ್ಪತ್ರೆಯ ವೈದ್ಯರ ಈ ಎಡವಟ್ಟನ್ನ ಮಾಡಿಕೊಂಡಿದ್ದಾರೆ. ಕೊಪ್ಪಳ ತಾಲೂಕಿನ ಲಾಚನಕೇರಿ ಬಳಿ ಜ.3 ರಂದು ಅಪಘಾತ ಸಂಭವಿಸಿತ್ತು. ಅಪಘಾತಕ್ಕೆ ತುತ್ತಾಗಿದ್ದ ಪಕೀರಪ್ಪ ದೊಡಮನಿಯನ್ನು ರಾತ್ರಿ 9 ಘಂಟೆಗೆ ಕೊಪ್ಪಳದ ಕೆ ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮರುದಿನ ದಿನ ಆ ವ್ಯಕ್ತಿಗೆ ಜೀವ ಇದ್ದರೂ ಡಿಸ್ಚಾರ್ಜ್ ಸಮ್ಮರಿಯಲ್ಲಿ ಡೆತ್ ಎಂದು ಬರೆದಿದ್ದನ್ನ ನೋಡಿ ಬಾಡಿ ಕೊಡಿ ಎಂದು ಕೇಳಿದಾಗ ಜೀವ ಇರುವುದು ಬೆಳಕಿಗೆ ಬಂದಿದೆ.ಕುಟುಂಬಸ್ಥರು ಆಸ್ಪತ್ರೆಯ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೆ ಆ ರೋಗಿಯನ್ನ ಜಿಲ್ಲಾ ಆಸ್ಪತ್ರೆಗೆ ಕರದೊಯ್ದರು ಅಲ್ಲಿ ಎರಡು ಗಂಟೆಗೆಗಳ ಕಾಲ ಚಿಕ್ಸಿತೆ ನೀಡಿದ್ದಾರೆ. ತೀವ್ರ ಉಸಿರಾಟದ ನಂತರ ಈಗ ಆ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಜಿಲ್ಲಾಸ್ಪತ್ರೆಯ ವೈದ್ಯರು ತಿಳಿಸಿದರು. ನಂತರ ಕೆಎಸ್ ಆಸ್ಪತ್ರೆಗೆ ವಿರುದ್ಧ ರೋಗಿಯ ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ. ಕೂಡಲೇ ವೈದ್ಯರು ಬರುವಂತೆ ಒತ್ತಾಯ ಮಾಡಿದ್ದಾರೆ.






 Advertisement 




Sign in to your account
Username or Email Address


Password

 Remember Me


