ಬೆಂಗಳೂರು: ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಲಿಕಾನ್ ಸಿಟಿಯ ವರ್ತೂರಿನಲ್ಲಿ ನಡೆದಿದೆ.ಮೃತ ಮಹಿಳೆಯನ್ನು ಪದ್ಮಾವತಿ(38) ಎಂದು ಗುರುತಿಸಲಾಗಿದೆ. ಈಕೆಯ ಪತಿ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದು, ಈತನ ಕಿರುಕುಳದಿಂದ ಬೇಸತ್ತು ಮಹಿಳೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ.ಪದ್ಮಾವತಿ ಅವರು 15 ವರ್ಷಗಳ ಹಿಂದೆ ಟೆಕ್ಕಿ ಭಾಸ್ಕರ್ ನನ್ನು ಮದುವೆಯಾಗಿದ್ದರು. ಈ ದಂಪತಿಗೆ 11 ವರ್ಷದ ಗಂಡು ಮಗುವೊಂದಿದೆ. ಇದೀಗ ಮಗು ಅಮ್ಮನಿಲ್ಲದೆ ಕಂಗಾಲಾಗಿದೆ.ಮೋಜು- ಮಸ್ತಿ ಅಂತ ಭಾಸ್ಕರ್ ತೇಲಾಡುತ್ತಿರುತ್ತಿದ್ದನು. ಅಲ್ಲದೆ ಪಾರ್ಟಿಗಳಲ್ಲಿ ಕೂಡ ಭಾಗಿಯಾಗುತ್ತಿದ್ದು, ಪತ್ನಿಗೆ ಚಿತ್ರಹಿಂಸೆ ಕೊಡುತ್ತಿದ್ದನು. ಅದರಲ್ಲೂ ತಾನು ಬೇರೆಯವರ ಜೊತೆ ಡ್ಯಾನ್ಸ್ ಮಾಡಿದ್ದಲ್ಲದೇ ಪತ್ನಿಯನ್ನು ಕೂಡ ಡ್ಯಾನ್ಸ್ ಮಾಡುವಂತೆ ಒತ್ತಾಯಿಸುತ್ತಿದ್ದನು. ಇದಕ್ಕೆ ಪದ್ಮಾವತಿ ಒಪ್ಪದಿದ್ದಾಗ ಆಕೆಗೆ ಕಿರುಕುಳ ನೀಡುತ್ತಿದ್ದನು ಎಂಬ ಆರೋಪ ಕೇಳಿಬಂದಿದೆ.ಗಂಡನ ಇಂತಹ ಮಾನಸಿಕ ಕಿರುಕುಳಗಳನ್ನು ತಾಳಲಾರದೆ ಪದ್ಮಾವತಿ ಅವರು ಈ ಹಿಂದೆಯೂ ಮೂರು ಬಾರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ವಿಫಲರಾಗಿದ್ದರು. ಆದರೆ ಇದೀಗ ನಾಲ್ಕನೇ ಬಾರಿ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾರೆ.ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಪತಿ ಭಾಸ್ಕರ್ ನನ್ನು ವರ್ತೂರ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.






 Advertisement 




Sign in to your account
Username or Email Address


Password

 Remember Me


