ಬೆಂಗಳೂರು: ಶಾಸಕ ಜಮೀರ್ ಅಹ್ಮದ್ ಖಾನ್ ಮೇಲಿನ ಪ್ರೀತಿಯನ್ನ ಸಿಎಂ ಬಿ.ಎಸ್.ಯಡಿಯೂರಪ್ಪ ಕೈ ಬಿಟ್ಟಿದ್ದಾರೆ. ಜಮೀರ್ ಅಹ್ಮದ್ ಕ್ಷೇತ್ರಕ್ಕೆ 200 ಕೋಟಿ ರೂ. ಅನುದಾನ ನೀಡುವಂತೆ ಮಾಡಿದ್ದ ಶಿಫಾರಸ್ಸನ್ನು ಮುಖ್ಯಮಂತ್ರಿಗಳು ವಾಪಸ್ ಪಡೆದುಕೊಂಡಿದ್ದಾರೆ.ತಮ್ಮ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾರ್ಯಕ್ಕೆ 200 ಕೋಟಿ ಅನುದಾನ ನೀಡುವಂತೆ ಜಮೀರ್ ಅಹಮ್ಮದ್ ಖಾನ್ 2020 ಡಿಸೆಂಬರ್ 9ರಂದು ಸಿಎಂಗೆ ಪತ್ರ ಬರೆದಿದ್ದರು. ಡಿಸೆಂಬರ್ 16ರಂದು ಸಹಿ ಹಾಕಿ ಜಮೀರ್ ಅವರ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಸಿಎಂ ಶಿಫಾರಸ್ಸು ಮಾಡಿದ್ದರು. ಡಿಸೆಂಬರ್ 18ರಂದು ಈ ಶಿಫಾರಸ್ಸು ಪತ್ರ ಹಣಕಾಸು ಇಲಾಖೆ ತಲುಪಿತ್ತು. ಈ ಸುದ್ದಿಯನ್ನು ಪಬ್ಲಿಕ್ ಟಿವಿ ವರದಿ ಬಿತ್ತರಿಸಿತ್ತು. ಪಬ್ಲಿಕ್ ಟಿವಿ ವರದಿ ಬಳಿಕ ಜನವರಿ 15ರಂದು ಅನುದಾನ ಬಿಡುಗಡೆ ಕುರಿತು ಮುಖ್ಯಮಂತ್ರಿಗಳು ಸಮರ್ಥನೆ ನೀಡುವ ಪ್ರಯತ್ನ ಮಾಡಿದ್ದರು.ಸಿಎಂ ಹಣ ಬಿಡುಗಡೆಗೆ ಆದೇಶಿರಲಿಲ್ಲ. ಕೇವಲ ಶಿಫಾರಸ್ಸು ಮಾತ್ರ ಮಾಡಿದ್ದರು. ಈಗ ಅದನ್ನು ವಾಪಸ್ ಪಡೆದಿದ್ದಾರೆ ಎಂದು ಹಣಕಾಸು ಇಲಾಖೆಯ ಅಧಿಕೃತ ಘೋಷಣೆ ಮಾಡಿದೆ. ಹಣಕಾಸು ಇಲಾಖೆಯೆ ಅಧಿಕೃತ ಘೋಷಣೆಯೆ ದಾಖಲೆ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಆರ್‍ಎಸ್‍ಎಸ್ ಮತ್ತು ಬಿಜೆಪಿ ನಿಷ್ಠರ ಒತ್ತಡಕ್ಕೆ ಮಣಿದು ಯಡಿಯೂರಪ್ಪನವರು ಶಿಫಾರಸ್ಸು ಪತ್ರ ಹಿಂಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.Sign in to your account
Username or Email Address


Password

 Remember Me


