ಮಂಗಳೂರು: ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಪರಿಣಾಮ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಧ್ವನಿ ಎತ್ತಿದ ತುಳು ಕಿರುತೆರೆ ನಟ ಮಂಗಳೂರಿನ ವಿಜಯ್ ಶೋಭರಾಜ್ ಪಾವೂರು ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.ವಿಜಯ್ ಶೋಭಾರಾಜ್ ಪಾವೂರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ‘ನಮೋ ನಮಗೆ ಮೋಸ, ಪೆಟ್ರೋಲ್ ಧಗ ಧಗ, ಡೀಸೆಲ್ ಭಗ ಭಗ’ ಎಂದು ಬರೆದುಕೊಂಡಿದ್ದರು. ಇದನ್ನು ವಿರೋಧಿಸಿರುವ ನಮೋ ಅಭಿಮಾನಿಗಳು ಮೋದಿ ಬಗ್ಗೆ ಮಾತಾನಾಡಿದರೆ ನಾವು ಸುಮ್ಮನಿರುವುದಿಲ್ಲ. ನಿಮ್ಮ ನೂತನ ತುಳು ಸಿನಿಮಾವನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ಕೊಟ್ಟಿದ್ದರು.ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪೋಸ್ಟ್ ಗೆ ತೀವ್ರ ಪ್ರತಿರೋಧ ಬರುತ್ತಿದ್ದಂತೆ ಶೋಭರಾಜ್ ಪೋಸ್ಟ್ ಡಿಲೀಟ್ ಮಾಡಿ ಅಭಿಮಾನಿಗಳಲ್ಲಿ ಕ್ಷಮೆ ಕೋರಿದ್ದಾರೆ.ಶೋಭರಾಜ್ ಹಲವು ತುಳು ಸಿನಿಮಾಗಳಲ್ಲಿ ಹಾಸ್ಯ ನಟನಾಗಿ, ನಿರ್ದೇಶಕರಾಗಿ ಮಿಂಚಿದ್ದರು. ಪ್ರಸ್ತುತ ಕನ್ನಡ ಖಾಸಗಿ ಚಾನಲ್ ಒಂದರಲ್ಲಿ ಬರುವ ಸೀರಿಯಲ್‍ನಲ್ಲೂ ಶೋಭರಾಜ್ ಕಾಣಿಸಿಕೊಂಡಿದ್ದಾರೆ.






 Advertisement 




Sign in to your account
Username or Email Address


Password

 Remember Me


