ಮಂಗಳೂರು: ಚಿರತೆ ಹಾಗೂ ನಾಯಿ ಎರಡೂ ಮನೆಯೊಂದರ ಶೌಚಾಲಯದಲ್ಲಿ ಬಂಧಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಕೈಕಂಬ ಗ್ರಾಮದಲ್ಲಿ ನಡೆದಿದೆ.ರೇಗಪ್ಪ ಎಂಬವರ ಮನೆಯ ಟಾಯ್ಲೆಟ್‍ನಲ್ಲಿ ಚಿರತೆ ಮತ್ತು ನಾಯಿ ಮಲಗಿವೆ. ನಾಯಿ ಹಿಡಿಯಲು ಮನೆಯ ಟಾಯ್ಲೆಟ್‍ಗೆ ಚಿರತೆ ನುಗ್ಗಿದೆ. ಚಿರತೆ ನುಗ್ಗಿದ್ರಿಂದ ಗಾಬರಿಗೊಂಡ ಮನೆಮಂದಿ ಹೊರಗಡೆ ಓಡಿದ್ದಾರೆ.ಈ ವೇಳೆ ಮನೆಯವರು ಚಿರತೆಯನ್ನು ಮನೆಯಲ್ಲಿ ಕೂಡಿ ಹಾಕಿದ್ದಾರೆ. ಹೀಗಾಗಿ ಟಾಯ್ಲೆಟ್ ಒಳಗಡೆ ಚಿರತೆ ಸಿಲುಕಿಕೊಂಡಿದೆ. ಚಿರತೆ ಮತ್ತು ನಾಯಿ ಒಂದೆ ಕಡೆ ಬಂಧಿಯಾಗಿವೆ. ಸ್ಥಳಕ್ಕೆ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿಗಳು ದೌಡಾಯಿಸಿದ್ದಾರೆ.


 Advertisement 







 Advertisement 




Sign in to your account
Username or Email Address


Password

 Remember Me


