ಚಿತ್ರದುರ್ಗ: ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರು ಬಿಜೆಪಿ ಸರ್ಕಾರವಾಗಿದೆ. ಕೊರೊನಾ ವಿಚಾರದಲ್ಲೂ ಹಣ ಲೂಟಿ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೆ ಟಾಂಗ್ ಕೊಟ್ಟಿದ್ದಾರೆ.ಚಿತ್ರದುರ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್ ಪಕ್ಷ ಅಂದರೆ ಭ್ರಷ್ಟಾಚಾರ ಎಂದು ಕಟೀಲ್ ಹೇಳಿದ್ದರು. ಆದರೆ ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರು ಬಿಜೆಪಿ ಸರ್ಕಾರವಾಗಿದೆ. ಕೊರೊನಾ ವಿಚಾರದಲ್ಲೂ ಹಣ ಲೂಟಿ ಮಾಡಿದ್ದಾರೆ ಎಂದು ಹೇಳುವ ಮೂಲಕವಾಗಿ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಟಾಂಗ್ ಕೊಟ್ಟಿದ್ದಾರೆ.ಬಜೆಟ್ ಕುರಿತಾಗಿ ಜನರಿಗೆ ಉತ್ಸಾಹ ಇಲ್ಲ ರೈತ, ಕಾರ್ಮಿಕ, ಸರ್ಕಾರಿ ನೌಕರರು ಸೇರಿ ಎಲ್ಲ ವರ್ಗಕ್ಕೆ ತೊಂದರೆಯಾಗುತ್ತದೆ. ಡೀಸೆಲ್, ಪೆಟ್ರೋಲ್ ಬೆಲೆ ಭಾರೀ ಏರಿಕೆ ಮಡಿದ್ದಾರೆ. ಬಿಜೆಪಿ ಆಡಳಿತದ ವಿರುದ್ಧ ಜನರು ರೊಚ್ಚಿಗೆದ್ದಿದ್ದಾರೆ. ಏಕೆ ಸುಮ್ಮನೆ ಕುಳಿತಿದ್ದೀರೆಂದು ಜನ ನಮಗೆ ಕರೆ ಮಾಡಿ ಕೇಳ್ತಿದ್ದಾರೆ. ಕೇಂದ್ರದಿಂದ ವರ್ಸ್ಟ್ ಬಜೆಟ್ ಎಂದು ಹೇಳಿದ್ದಾರೆ.






 Advertisement 




Sign in to your account
Username or Email Address


Password

 Remember Me


