ಹಾಸನ: ಜಿಲ್ಲೆಗೆ ಸಂಬಂಧಿಸಿದಂತೆ ಬಜೆಟ್ ನನಗೂ ಹತಾಶೆಯಾಗಿದ್ದು, ನಮ್ಮ ಸಂಸದರು ಇಲ್ಲಿ ಬೀಗರೂಟ, ಮದುವೆ ಊಟ ಮಾಡಿಕೊಂಡು ಕುಳಿತರೆ ಕೆಲಸ ಆಗಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಶಾಸಕ ಪ್ರೀತಂ ಗೌಡ ವ್ಯಂಗ್ಯವಾಡಿದ್ದಾರೆ.ನಗರದಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಜಿಲ್ಲೆಯ ಸಮಸ್ಯೆಯನ್ನು ಕೇಂದ್ರದ ಗಮನಕ್ಕೆ ತರಬೇಕಾದವರು ಸಂಸದ ಪ್ರಜ್ವಲ್ ರೇವಣ್ಣ. ಅವರು ಸರಿಯಾಗಿ ಕೆಲಸ ಮಾಡಿಲ್ಲ ಎಂದು ಶಾಸಕ ಪ್ರೀತಂ ಗೌಡ ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ.ಸಂಸತ್ತಿನಲ್ಲಿ ಪ್ರಜ್ವಲ್ ರೇವಣ್ಣ ಹಾಜರಾತಿ ನೋಡಿದರೆ ಕಡೆಯಿಂದ ಎರಡನೆಯವರೋ, ಮೂರನೆಯವರೋ ಇರಬೇಕು. ಅವರು ಯುವಕರಿದ್ದಾರೆ, ಉತ್ತವಾಗಿ ಕೆಲಸ ಮಾಡುತ್ತಾರೆ ಎಂಬ ನೀರಿಕ್ಷೆ ಜನರಿಗೆ ಇತ್ತು. ಪ್ರಜ್ವಲ್ ರೇವಣ್ಣ ಲೋಕಸಭೆಗೆ ಹೋಗಿ ಮಾತನಾಡಲು ಜಿಲ್ಲೆಯ ಜನ ಆಯ್ಕೆ ಮಾಡಿದ್ದಾರೆ. ಅವರು ಜಿಲ್ಲೆಗೆ ಏನು ಬೇಕು, ಸಮಸ್ಯೆ ಏನು ಎಂಬ ಬಗ್ಗೆ ಬೆಳಕು ಚೆಲ್ಲಬೇಕು. ಆದರೆ ಇಲ್ಲಿ ಬೀಗರೂಟ, ಮದುವೆ ಮಾಡಿಕೊಂಡು ಕೂತರೆ ಕೆಲಸ ಆಗಲ್ಲ. ಹಿರಿಯರಾದ ದೇವೇಗೌಡರ ಮಾರ್ಗದರ್ಶನ ಪಡೆದು ಹಾಸನ ಸಂಸದರು ಕೆಲಸ ಮಾಡಬೇಕು ಎಂದು ಶಾಸಕ ಪ್ರೀತಂಗೌಡ ಟೀಕೆ ಮಾಡಿದ್ದಾರೆ.Sign in to your account
Username or Email Address


Password

 Remember Me


