ಬೆಂಗಳೂರು: ಅನಾರೋಗ್ಯ ಮತ್ತು ಕೋವಿಡ್ ಪಾಸಿಟಿವ್ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಸಿಎಂ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಜನವರಿ 21ರಂದು ಶಶಿಕಲಾ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು.ಜನವರಿ 27ರಂದು ಜೈಲಿನಿಂದ ಬಿಡುಗಡೆಯಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದ್ರೆ ಅಮವಾಸ್ಯೆ ಬಳಿಕ ಶಶಿಕಲಾ ತಮಿಳುನಾಡಿಗೆ ತೆರಳಲಿದ್ದಾರೆ ಎಂದು ಹೇಳಲಾಗ್ತಿದೆ. ಫೆಬ್ರವರಿ 11ರ ನಂತರ ಅದ್ಧೂರಿ ಮೆರವಣಿಗೆ ಮೂಲಕ ಶಶಿಕಲಾ ತಮಿಳುನಾಡಿಗೆ ಎಂಟ್ರಿ ಕೊಡಲಿದ್ದಾರೆ. ಈ ಹಿನ್ನೆಲೆ ಬೆಂಗಳೂರು ಹೊರ ವಲಯದಲ್ಲಿರುವ ಆಪ್ತರ ಐಷಾರಾಮಿ ಮನೆಯಲ್ಲಿ ಶಶಿಕಲಾ ಉಳಿದುಕೊಳ್ಳಲಿದ್ದಾರೆ.ಈ ಹಿಂದೆ ಶಶಿಕಲಾ ಅವರಿಗೆ ಭದ್ರತೆ ನೀಡಿದ ಸಿಬ್ಬಂದಿಯನ್ನೇ ಸದ್ಯ ಸಹ ನೇಮಿಸಲಾಗಿದೆ. 10 ಖಾಸಗಿ ಅಂಗ ರಕ್ಷಕರು ಭದ್ರತೆಯಲ್ಲಿ ಶಶಿಕಲಾ ಆಸ್ಪತ್ರೆಯಿಂದ ತೆರಳಿದ್ದಾರೆ.


 Advertisement 







 Advertisement 




Sign in to your account
Username or Email Address


Password

 Remember Me


