ಹಾವೇರಿ: ಇಟ್ಟಿಗೆ ತಯಾರಿಕೆ ಕೆಲಸಕ್ಕೆ ಹೋಗಿ ಬರೋದಾಗಿ ಇಬ್ಬರು ಮಕ್ಕಳೊಂದಿಗೆ ತೆರಳಿದ್ದ ತಾಯಿ ಕಾಣೆಯಾಗಿರೋ ಪ್ರಕರಣ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಗೊಟಗೋಡಿ ಗ್ರಾಮದಲ್ಲಿ ನಡೆದಿದೆ.ಕಾಣೆಯಾದವರನ್ನ ತಾಯಿ ರೇಣುಕಾ ಗುಳೇದ್ (28) ಆಗಿದ್ದಾಳೆ. ರೇಣುಕಾ ಜೊತೆಗೆ ಕಾಣೆಯಾದ ಏಳು, ಆರು ವರ್ಷದ ಮಕ್ಕಳಾಗಿದ್ದಾರೆ. ಜನವರಿ 22 ರಂದು ಇಬ್ಬರು ಮಕ್ಕಳೊಂದಿಗೆ ಕೆಲಸಕ್ಕೆ ಅಂತಾ ರೇಣುಕಾ ಮನೆಯಿಂದ ತೆರಳಿದ್ದರು. ಅಂದು ಕೆಲಸಕ್ಕೆ ಹೋದ ತಾಯಿ ಮತ್ತು ಆಕೆಯ ಜೊತೆ ಇದ್ದ ಮಕ್ಕಳು ಮೂವರು ನಾಪತ್ತೆಯಾಗಿದ್ದಾರೆ.ಈವರೆಗೂ ತಾಯಿ ಮತ್ತು ಮಕ್ಕಳಿಗಾಗಿ ಹುಡುಕಾಡಿದರೂ ಸುಳಿವು ಸಿಗದಿರೋದಕ್ಕೆ ರೇಣುಕಾ ಸಂಬಂಧಿಕರು ಈ ಸಂಬಂಧ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರೋ ಶಿಗ್ಗಾಂವಿ ಠಾಣೆ ಪೊಲೀಸರು ತಾಯಿ ಮತ್ತು ಇಬ್ಬರ ಮಕ್ಕಳ ಹುಡುಕಾಟಕ್ಕೆ ಜಾಲ ಬೀಸಿದ್ದಾರೆ.






 Advertisement 




Sign in to your account
Username or Email Address


Password

 Remember Me


