ಬೆಂಗಳೂರು: ಬ್ರಾಂಡೆಡ್ ಬಟ್ಟೆಗಳು ಮತ್ತು ಶೂಗಳನ್ನು ರಾತ್ರಿ ಸಮಯದಲ್ಲಿ ಕಳ್ಳತನ ಮಾಡುವುದರೊಂದಿಗೆ ಅಂಗಡಿ ಮುಂಭಾಗದಲ್ಲಿ ಹಾಕಿರುವಂತಹ ಬಲ್ಬುಗಳನ್ನು ಕದಿಯುತ್ತಿದ್ದ ಕಳ್ಳನ ಕೈಚಳಕ ಇದೀಗ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಬೆಂಗಳೂರು ಹೊರವಲಯದ ಸರ್ಜಾಪುರ ರಸ್ತೆ ಕೊಡತಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಳ್ಳ ಪ್ರತಿದಿನ ಬೈಕ್‍ನಲ್ಲಿ ರಾತ್ರಿ ಸಮಯದಲ್ಲಿ ಬಂದು ಮನೆ ಹೊರಗಡೆ ಬಿಟ್ಟಿರುವ ಶೂ ಮತ್ತು ಬ್ರಾಂಡೆಡ್ ಬಟ್ಟೆಗಳನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದ.ಸರ್ಜಾಪುರದ ಸ್ಥಳೀಯ ನಿವಾಸಿಗಳು ಕಳ್ಳನ ಹಾವಳಿಯಿಂದ ಕಂಗಾಲಾಗಿದ್ದರು. ರಾತ್ರಿ ಸಮಯದಲ್ಲಿ ಮನೆಯಿಂದ ಹೊರಗಡೆ ಯಾವುದೇ ವಸ್ತು ಬಿಡಲು ಭಯ ಬೀಳುತ್ತಿದ್ದರು. ಇದೀಗ ಕಳ್ಳ ಅಂಗಡಿ ಮುಂಭಾಗದ ಬಲ್ಬು ಕದಿಯುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆತನ ವಿರುದ್ಧ ಬೆಳ್ಳಂದೂರು ಮತ್ತು ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲು ಸ್ಥಳೀಯರು ನಿರ್ಧರಿಸಿದ್ದಾರೆ.






 Advertisement 




Sign in to your account
Username or Email Address


Password

 Remember Me


