ಧಾರವಾಡ: ತಾಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮದ ಬಸಪ್ಪ ಅವರಿಗೆ ಸೇರಿದ ಹೋರಿಯೊಂದು 4.55 ಲಕ್ಷ ರೂ.ಗೆ ಬಿಕರಿಯಾಗಿ ಎಲ್ಲರ ಹುಬ್ಬೇರುವಂತೆ ಮಾಡಿದೆ.ಬೆಳಗಾವಿ ಜಿಲ್ಲೆಯ ಬೆಳಗುಂದಿಯ ಕೃಷ್ಣಾ ಪಾಟೀಲ್ ಎಂಬವರು ಈ ಹೋರಿಯನ್ನು ಹುಡುಕಿಕೊಂಡು ಬಂದು, 4ಲಕ್ಷ 55 ಸಾವಿರ ರೂಪಾಯಿ ಕೊಟ್ಟು ಖರೀದಿ ಮಾಡಿದ್ದಾರೆ. ಹೋರಿಯ ಮಾಲೀಕ ಬಸಪ್ಪ ಅವರ ತಂದೆ ಭೀಮಪ್ಪ ಕಳೆದ ನಾಲ್ಕು ವರ್ಷಗಳ ಹಿಂದೆ ರಾಣೆಬೆನ್ನೂರ ತಾಲೂಕು ದೇವರಗುಡ್ಡದಲ್ಲಿ 30 ಸಾವಿರ ರೂಪಾಯಿಗೆ ಜೋಡಿ ಹೋರಿ ಖರೀದಿಸಿದ್ದರು. ಅ ಪೈಕಿ ಇದೊಂದು ಹೋರಿ ಬಲಷ್ಠವಾಗಿ ಬೆಳೆದಿದೆ.ಎಲ್ಲಿಯೇ ಚಕ್ಕಡಿ ಷರತ್ತು ಇದ್ದರೆ ಅಲ್ಲಿ ಜೊತೆಗಿರುವ ಹೋರಿಯನ್ನೂ ಸಹ ಹುರಿದುಂಬಿಸಿಕೊಂಡು ಓಡಿ ಪ್ರಥಮ ಬಹುಮಾನ ಪಡೆಯುವ ಸಾಮರ್ಥ್ಯ ಈ ಹೋರಿಯಲ್ಲಿತ್ತು. ಹೀಗಾಗಿ ಇದಕ್ಕೆ ನಿತ್ಯ ಮೂರು ಹೊತ್ತು ಹುರುಳಿ ನುಚ್ಚು, 2 ಲೀಟರ್ ಹಾಲು, ಎರಡು ದಿನಕ್ಕೊಮ್ಮೆ ಮೊಟ್ಟೆ ಕೊಟ್ಟು ಈ ಹೋರಿಯನ್ನು ಷರತ್ತಿನ ಹೋರಿಯನ್ನಾಗಿ ಬೆಳೆಸಿದ್ದರು. ಹೀಗಾಗಿ ಈ ಹೋರಿಗೆ ಬಂಗಾರದ ಬೆಲೆ ಒದಗಿ ಬಂದಿದೆ.ಎಲ್ಲೇ ಹೋದರೂ ಪ್ರಥಮ ಬಹುಮಾನ ಖಚಿತ ಎನ್ನುವಂತಿದ್ದ ಈ ಹೋರಿ ಕೇವಲ ಎರಡೇ ತಿಂಗಳಲ್ಲಿ ನಡೆದ 8 ಚಕ್ಕಡಿ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ ಪಡೆದಿದ್ದರೆ, 4 ಸ್ಪರ್ಧೆಗಳಲ್ಲಿ ದ್ವಿತೀಯ ಬಹುಮಾನ ಪಡೆದು ತನ್ನ ಸಾಮರ್ಥ್ಯ ಹೊರಹಾಕಿತ್ತು. ಇಲ್ಲಿಯವರೆಗೆ ಒಟ್ಟು 2 ಎರಡು ಬೈಕ್, ಒಂದೂವರೆ ಲಕ್ಷ ರೂಪಾಯಿಗೂ ಹೆಚ್ಚು ಬಹುಮಾನದ ಹಣವನ್ನು ಈ ಹೋರಿ ಬಸಪ್ಪನವರಿಗೆ ತಂದು ಕೊಟ್ಟಿತ್ತು.ನಿತ್ಯವೂ ಬೈಕ್ ಜೊತೆಗೆ ರೇಸಿಂಗ್ ಮಾಡಿಸಿ ಓಡಿಸುವ ತಾಲೀಮು ಹಾಗೂ ಕೆರೆಯಲ್ಲಿ ಈಜಲು ಬಿಡುವ ಮೂಲಕ ಇದನ್ನು ಪಳಗಿಸಲಾಗುತಿತ್ತು. ಹಲವು ಕಡೆಗಳಲ್ಲಿ ಚಕ್ಕಡಿ ಸ್ಪರ್ಧೆಯಲ್ಲಿ ಬಹುಮಾನಗಳಿಸಿರುವ ಕಾರಣಕ್ಕೆ ಈ ಹೋರಿ ಇಷ್ಟೊಂದು ಬೇಡಿಕೆ ಪಡೆದುಕೊಂಡಿದೆ. ಇದನ್ನು ಖರೀದಿಸಿರುವ ಕೃಷ್ಣಾ ಪಾಟೀಲ್ ಅವರ ಬಳಿ ಒಂದು ಹೋರಿ ಇದ್ದು ಆ ಹೋರಿಗೆ ಜೋಡಿಗಾಗಿ ಈ ಹೋರಿಯನ್ನು ಖರೀದಿಸಿದ್ದಾರೆ. ಇನ್ನು ಮಹಾರಾಷ್ಟ್ರದಲ್ಲಿ ಮಾತ್ರವೇ ಹೀಗೆ ಚಕ್ಕಡಿ ಸ್ಪರ್ಧೆಗಳಲ್ಲಿ ಪ್ರಥಮ ಬರುವ ಹೋರಿಗಳನ್ನು ಸವಾಲ್ ಮಾಡಿ ಪ್ರತಿಷ್ಠೆಗೆ ಬಿದ್ದು ಲಕ್ಷಾಂತರ ರೂಪಾಯಿ ಕೊಟ್ಟು ಖರೀದಿಸುತ್ತಾರೆ.






 Advertisement 




Sign in to your account
Username or Email Address


Password

 Remember Me


