ಬೆಂಗಳೂರು: ನಂದು 50 ಸಿನಿಮಾ ಆಯ್ತು. ನನ್ನ ಕಥೆ ಬಿಡಿ. ಮುಂದೆ ಯುವನಟರ ಸಿನಿಮಾಗಳಿಗೆ ಸಮಸ್ಯೆಯಾಗುತ್ತೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.ರಾಬರ್ಟ್ ಸಿನಿಮಾಗೆ ತೆಲುಗು ಇಂಡಸ್ಟ್ರಿಯಲ್ಲಿ ಅಡ್ಡಿಯಾಗುತ್ತಿರುವ ಸಂಬಂಧ ಫಿಲಂ ಚೇಂಬರ್‍ಗೆ ದೂರು ನೀಡಲು ಹೋಗುವ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ತೆಲುಗು ಸಿನಿಮಾಗಳು ಕರ್ನಾಟದಲ್ಲಿ ಯಾವುದೇ ತೊಂದರೆ ಇಲ್ಲದೇ ರಿಲೀಸ್ ಆಗುತ್ತೆ. ಆದರೆ ಆಂಧ್ರದಲ್ಲಿ ಕನ್ನಡ ಸಿನಿಮಾಗಳಿಗೆ ತೊಂದರೆಯಾಗುತ್ತೆ ಎಂದರು.ನಂದು 50 ಸಿನಿಮಾ ಆಯ್ತು. ನನ್ನ ಕಥೆ ಬಿಡಿ. ಮುಂದೆ ಯುವನಟರ ಸಿನಿಮಾಗಳಿಗೆ ಸಮಸ್ಯೆಯಾಗುತ್ತೆ ಎಂದು ತೆಲುಗು ಇಂಡಸ್ಟ್ರಿ ವಿರುದ್ಧ ಗರಂ ಆದರು.ಕೊರೊನಾ ಬಳಿಕ ತೆಲುಗು ಸಿನಿಮಾ ಇಂಡಸ್ಟ್ರಿ ಹೊಸ ರೂಲ್ಸ್ ಜಾರಿ ಮಾಡಿಕೊಂಡಿದೆ. ಅದರ ಅನ್ವಯ ತೆಲುಗು ಸಿನಿಮಾ ಬಿಡುಗಡೆಯ ದಿನ ಬೇರೆ ಯಾವುದೇ ಪರಿಭಾಷೆಯ ಚಿತ್ರಗಳು ತಮ್ಮ ನಾಡಿನಲ್ಲಿ ಬಿಡುಗಡೆ ಮಾಡುವಂತಿಲ್ಲ ಅನ್ನೋ ನಿಯಮ ತೆಲುಗು ಸಿನಿಮಾ ಇಂಡಸ್ಟ್ರಿ ರೂಢಿಸಿಕೊಂಡಿದೆ. ಹೀಗಾಗಿ ಆಂಧ್ರ ತೆಲಂಗಾಣದಲ್ಲಿ ಮಾರ್ಚ್ 11 ಕ್ಕೆ ತೆಲುಗು ಸಿನಿಮಾ ರಿಲೀಸ್ ಇರುವ ಕಾರಣ ಕನ್ನಡದ ‘ರಾಬರ್ಟ್’ ಬಿಡುಗಡೆಗೆ ಅವಕಾಶ ನೀಡುತ್ತಿಲ್ಲ. ಇದನ್ನ ಪ್ರಶ್ನಿಸಿ ದರ್ಶನ್ ಹಾಗೂ ರಾಬರ್ಟ್ ಟೀಮ್ ಇಂದು ಮಧ್ಯಾಹ್ನ ಕನ್ನಡ ಫಿಲ್ಮ್ ಚೇಂಬರ್ ಗೆ ದೂರು ನೀಡುತ್ತಿದೆ. ತೆಲುಗಿಗೆ ಡಬ್ ಆಗಿ ಮಾರ್ಚ್ 11ಕ್ಕೆ ‘ರಾಬರ್ಟ್’ ರಿಲೀಸ್ ಆಗುತ್ತಿದೆ. ಇದನ್ನ ತೆಲುಗು ಇಂಡಸ್ಟ್ರಿ ತಡೆದಿದೆ. ನಟ ದರ್ಶನ್, ನಿರ್ಮಾಪಕ ಉಮಾಪತಿ ಹಾಗೂ ನಿರ್ದೇಶಕ ತರುಣ್ ಸುಧೀರ್ ಫಿಲ್ಮ್ ಚೇಂಬರ್ಗೆ ದೂರು ಸಲ್ಲಿಸಲಿದ್ದಾರೆ.Sign in to your account
Username or Email Address


Password

 Remember Me


