ದಾವಣಗೆರೆ: ಊಟ ಮಾಡಿ ಕೈ ತೊಳೆಯಲು ಕಾಲುವೆಗೆ ಇಳಿದಿದ್ದ ಯುವತಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸೂಳೆಕೆರೆ ಬಳಿ ನಡೆದಿದೆ.ಕಾಲು ಜಾರಿ ನೀರು ಹರಿಯುತ್ತಿರುವ ಕಾಲುವೆಗೆ ಬಿದ್ದು ಮೃತಪಟ್ಟ ಯುವತಿಯನ್ನು ಶ್ರುತಿ (21) ಎಂದು ಗುರುತಿಸಲಾಗಿದೆ. ಈಕೆ ಮರವಂಜಿ ಗ್ರಾಮದ ಯುವತಿಯಾಗಿದ್ದಾಳೆ. ತಾಯಿ ಹಾಗೂ ಅಣ್ಣನ ಜೊತೆ ತಾಯಿ ತವರು ಮನೆ ಹಾರೋಸಾಗರಕ್ಕೆ ಹೋಗಿ ಬರುವಾಗ ಈ ಘಟನೆ ನಡೆದಿದೆ.ಸೂಳೆಕೆರೆ ಬಳಿ ಇರುವ ತೊಟ್ಟಿಲು ಬಳಿಯ ಕಾಲುವೆ ಹತ್ತಿರ ಕುಳಿತು ಮೂವರು ಊಟ ಮಾಡಿದ್ದಾರೆ. ನಂತರ ಯುವತಿ ಕೈ ತೊಳೆಯಲೆಂದು ಕಾಲುವೆ ಬಳಿ ಹೋಗಿದ್ದಾಳೆ. ಆಗ ಕಾಲು ಜಾರಿ ಯುವತಿ ಬಿದ್ದಿದ್ದಾಳೆ. ಜೊತೆಯಲ್ಲೇ ಇದ್ದ ತಾಯಿ ಹಾಗೂ ಅಣ್ಣ ಶ್ರುತಿಯನ್ನು ರಕ್ಷಿಸಲು ಕಾಲುವೆಯಲ್ಲಿ ಬಿದ್ದರಬಹುದು ಎನ್ನುವ ಅನುಮಾನ ವ್ಯಕ್ತವಾಗಿದೆ.ಯುವತಿಯ ಶವ ಮೆದಕೆರೆ ಬಳಿ ಪತ್ತೆಯಾಗಿದ್ದು, ಉಳಿದ ಇಬ್ಬರಿಗೆ ಸ್ಥಳೀಯರು ಹುಡುಕಾಟ ನಡೆಸುತ್ತಿದ್ದಾರೆ. ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






 Advertisement 




Sign in to your account
Username or Email Address


Password

 Remember Me


