ತುಮಕೂರು: ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಶ್ರೀಗಳ ಹೆಸರಿನಲ್ಲಿ ನಿರ್ಮಾಣವಾಗುತ್ತಿದ್ದ ಜೈವಿಕ ವನ ಹೊತ್ತಿ ಉರಿದಿದೆ.ತುಮಕೂರು ತಾಲೂಕು ಬಸ್ತಿ ಬೆಟ್ಟದ ಬಳಿ ಇರುವ ಗಿಡಮೂಲಿಕೆ ಬೆಳೆಯುತ್ತಿದ್ದ ಜೈವಿಕ ವನಕ್ಕೆ ಬೆಂಕಿ ಬಿದ್ದಿದೆ. ಈ ವನ ಸಿದ್ದಗಂಗಾ ಸಂಸ್ಥೆಗೆ ಸೇರಿದೆ.ಇಲ್ಲಿ ಹಲವು ರೋಗಗಳ ಮೇಲೆ ಪ್ರಭಾವ ಬೀರುವ ಗಿಡಮೂಲಿಕೆಗಳನ್ನ ಬೆಳೆಸಲಾಗುತ್ತಿತ್ತು. ಇದೀಗ ಈ ವನಕ್ಕೆ ಕಿಡಿಗೇಡಿಗಳು ಬೆಂಕಿ ಇಟ್ಟಿರುವ ಶಂಕೆ ವ್ಯಕ್ತವಾಗುತ್ತಿದೆ. ಗಟನೆಯಿಂದ ಅಪಾರ ಪ್ರಮಾಣದ ಸಸ್ಯ ಸಂಪತ್ತು ನಾಶಗೊಂಡಿದೆ.ಈ ಘಟನೆ ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.Sign in to your account
Username or Email Address


Password

 Remember Me


