ಕೋಲಾರ: ಜನವರಿ 22 ರಂದು ವ್ಯಕ್ತಿಯೋರ್ವನನ್ನ ಆಟೋ ಸಮೇತ ಅರೆಬೆಂದ ಸ್ಥಿತಿಯಲ್ಲಿ ಸುಟ್ಟು ಹಾಕಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕು ಮಲ್ಲಯ್ಯನಗುರ್ಕಿ ಗ್ರಾಮದ ಬಳಿ ನಡೆದಿತ್ತು. ಇದೀಗ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಕೋಲಾರದ ಮಲ್ಲಯ್ಯನಗುರ್ಕಿ ಗ್ರಾಮದ ಬಳಿ ಕೊಲೆ ಮಾಡಿ ಆಟೋದಲ್ಲಿ ಶವವಿಟ್ಟು ಆಟೋಗೆ ಬೆಂಕಿ ಇಟ್ಟಿದ್ದರು. ಕೊಲೆಯಾದ ವ್ಯಕ್ತಿಯನ್ನು ಅಪ್ಪು ಆಲಿಯಾಸ್ ರಮೇಶ್ ಎಂದು ಗುರುತಿಸಲಾಗಿತ್ತು. ಕೋಲಾರ ಜಿಲ್ಲೆಯ ಬಂಗಾರಪೇಟೆಯ ಗಂಗಮ್ಮನಪಾಳ್ಯ ನಿವಾಸಿಯಾಗಿದ್ದಾನು.ಮೃತ ರಮೇಶ್ ಆಟೋ ಚಾಲಕ ಕೆಲಸ ಮಾಡುತ್ತಿದ್ದನು. ಆಟೋ ಸಮೇತ ಸುಟ್ಟು ಹಾಕಿದ್ದರು. ಈ ಪ್ರಕರಣವನ್ನು ಬಂಗಾರಪೇಟೆ ಪೊಲೀಸರು ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದರು. ಈ ಕೊಲೆ ಪ್ರಕರಣದಲ್ಲಿ ಆರೋಪಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.ರಮೇಶ್‍ನನ್ನು ಸ್ವಂತ ತಮ್ಮನೇ ಕೊಲೆಗೈದು ಸುಟ್ಟು ಹಾಕಿದ್ದಾನೆ. ಮೃತ ರಮೇಶ್‍ನ ತಮ್ಮ ರಾಜೇಶ್ ಮಕ್ಕಳಿಗಾಗಿ ಅಣ್ಣನನ್ನು ಕೊಂದುಹಾಕಿ ಪರಾರಿಯಾಗಿದ್ದಾನೆ. ಆರೋಪಿ ರಾಜೇಶ್‍ನಿಗೆ ಮಕ್ಕಳಿರಲಿಲ್ಲ. ಹೀಗಾಗಿ ಅಣ್ಣನ ಮಕ್ಕಳನ್ನು ದತ್ತು ನೀಡುವಂತೆ ಕೇಳಿದ್ದನು. ಇದಕ್ಕೆ ರಮೇಶ್ ಒಪ್ಪಿರಲಿಲ್ಲ. ಹೀಗೆ ಒಂದು ದಿನ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಆಗ ಇಬ್ಬರ ನಡುವೆ ಜಗಳವಾಗಿದೆ. ಗಲಾಟೆಯಲ್ಲಿ ರಾಜೇಶ್ ಅಣ್ಣನ ತಲೆಗೆ ಮಚ್ಚಿನಿಂದ ಕೊಡೆದು ಕೊಲೆ ಮಾಡಿದ್ದಾನೆ. ನಂತರ ಸ್ನೇಹಿತ ಅಜಯ್ ಸಹಾಯದಿಂದ ಆಟೋದಲ್ಲಿ ಹೋಗಿ ಸುಟ್ಟು ಹಾಕಿ ಆರೋಪಿಗಳು ಪರಾರಿಯಾಗಿದ್ದರು. ಈ ಪ್ರಕರಣದ ಕುರಿತಾಗಿ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಆರೋಪಿ ತಮ್ಮ ಸೆರೆ ಸಿಕ್ಕಿದ್ದಾನೆ.






 Advertisement 




Sign in to your account
Username or Email Address


Password

 Remember Me


