ಕಾರವಾರ: ತನ್ನ ಗಂಡ ತನ್ನೊಂದಿಗೆ ಹೆಚ್ಚು ಸಮಯ ಕಳೆಯುವುದಿಲ್ಲ ಹಾಗೂ ಮಾತನಾಡುವುದಿಲ್ಲ ಎಂದು ಮನನೊಂದ ಗೃಹಿಣಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಇಂದಿರಾ ನಗರದಲ್ಲಿ ನಡೆದಿದೆ.ಮೂಲತಃ ಶಿರಸಿ ತಾಲೂಕಿನ ಗಿಡಮಾವಿನಕಟ್ಟೆಯ ನಿವಾಸಿಯಾಗಿದ್ದ ಪಲ್ಲವಿ ವಿಜಯ ದೇವಡಿಗ (27) ಆತ್ಮಹತ್ಯೆಗೆ ಶರಣಾದ ಗೃಹಿಣಿ. ಎರಡು ವರ್ಷಗಳಿಂದ ಪತಿಯೊಂದಿಗೆ ಇಂದಿರಾ ನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು.ಪತಿ ತನ್ನ ಜೊತೆ ಹೆಚ್ಚಿನ ಸಮಯ ಕಳೆಯುವುದಿಲ್ಲ ಎಂದು ಕೊರಗುತ್ತಿದ್ದರು. ಇಂದು ಪತಿ ಗೆಳೆಯರೊಂದಿಗೆ ಕ್ರಿಕೆಟ್ ನೋಡಲು ತೆರಳಿದ್ದರಿಂದ ಪಲ್ಲವಿ ಸಿಟ್ಟಾಗಿದ್ದರು. ಮಗನಿಗಾಗಿ ಕಟ್ಟಲಾಗಿದ್ದ ಜೋಕಾಲಿಯ ಸೀರೆ ಸೆರಗನ್ನು ಬಿಚ್ಚಿ ಅದರ ಮೂಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


