ರಾಯಚೂರು: ಪತ್ನಿಯನ್ನು ಜಾತ್ರೆಗೆ ಕಳುಹಿಸಿ ಪ್ರೇಯಸಿಯನ್ನು ಮನೆಗೆ ಕರೆಸಿಕೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೇವದುರ್ಗ ತಾಲೂಕಿನ ಹೇಮನೂರಿನಲ್ಲಿ ನಡೆದಿದೆ.ಮೃತಪಟ್ವವರನ್ನು ಹೇಮನೂರು ಗ್ರಾಮದ ರಂಗಣ್ಣ(30) ಮತ್ತು ದೇವದುರ್ಗದ ವಿವಾಹಿತ ಯುವತಿ ಎಂದು ಗುರುತಿಸಲಾಗಿದೆ. ಮೃತ ರಂಗಣ್ಣನಿಗೆ ಕಳೆದ ಆರು ವರ್ಷಗಳ ಹಿಂದೆ ಮದುವೆ ಆಗಿತ್ತು. ಆದರೂ ಈ ವಿವಾಹಿತೆ ಜೊತೆ ಅಕ್ರಮ ಸಂಬಂಧ ಮುಂದುವರಿಸಿದ್ದ. ಯುವತಿಗೂ ಬೇರೊಂದು ಮದುವೆಯಾಗಿದ್ದು ಆದರೂ ರಂಗಣ್ಣನ ಸಖ್ಯ ಮುಂದುವರಿಸಿದ್ದಳು.ರಂಗಣ್ಣನಿಗೆ ಮದುವೆಯಾಗಿ 6 ವರ್ಷ ಕಳೆದರು ಮಕ್ಕಳಿರಲಿಲ್ಲ. ಆದರೂ ಪತಿ ಪತ್ನಿ ಸಂಸಾರ ಮುಂದುವರಿಸುತ್ತಿದ್ದರು. ಈ ನಡುವೆ ರಂಗಣ್ಣ ಹೆಂಡತಿಯನ್ನು ಕೊತ್ತದೊಡ್ಡಿ ಜಾತ್ರೆಗೆ ಕಳುಹಿಸಿ, ನಂತರ ತನ್ನ ಪ್ರೇಯಸಿಯನ್ನು ಮನೆಗೆ ಕರೆಸಿಕೊಂಡಿದ್ದಾನೆ. ಬಂದ ನಂತರ ಮನೆಯ ಕೋಣೆಯಲ್ಲಿ ರಂಗಣ್ಣ ಮತ್ತು ಪ್ರೇಯಸಿ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ದೇವದುರ್ಗ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.






 Advertisement 




Sign in to your account
Username or Email Address


Password

 Remember Me


