ಮಂಡ್ಯ: ನಮ್ಮ ಪವರ್ ಇದ್ದಾಗಲೇ ನಮ್ಮ ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಳ್ಳಬೇಕು ಇಲ್ಲ ಎಂದರೆ ಕಷ್ಟ ಆಗುತ್ತದೆ ಎಂದು ಸಚಿವ ನಾರಾಯಣಗೌಡ ಹೇಳಿದ್ದಾರೆ.ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ನಡೆದ ಮೇಲುಕೋಟೆ ಕ್ಷೇತ್ರದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪುಟ್ಟರಾಜು ಅವರು ಮಂತ್ರಿಯಾಗಿದ್ದಾಗ ಅವರ ಕ್ಷೇತ್ರಕ್ಕೆ 1,600 ಕೋಟಿ ಅಭಿವೃದ್ಧಿ ಕೆಲಸವನ್ನು ತೆಗೆದುಕೊಂಡರು. ಆಗ ನಾನು ಕೇಳಿಕೊಂಡೆ ನಮಗೂ ಸ್ವಲ್ಪ ಕೊಡಿ ಎಂದು. ಆಗ ಅವರು ನಮ್ಮನ್ನು ಕೈ ಬಿಟ್ಟು ಬಿಟ್ಟರು. ಅವರು ಏಕೆ ಮಾಡಿದರು ಅಂತಾ ನನಗೆ ಈಗ ಗೊತ್ತಾಗುತ್ತಿದೆ ಎಂದರು.ನಮ್ಮ ಪವರ್ ಇದ್ದಾಗಲೇ ನಮ್ಮ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕು ಎಂದು ಗೊತ್ತಾಗಿದೆ. ನಮಗೆ ಈಗ ಪವರ್ ಇರುವ ಕಾರಣ ಕೆ.ಆರ್.ಪೇಟೆ ಕ್ಷೇತ್ರಕ್ಕೆ 1,200 ಕೋಟಿ ಅಭಿವೃದ್ಧಿ ಕೆಲಸಗಳನ್ನು ತೆಗೆದುಕೊಂಡಿದ್ದೇನೆ. ಹಾಗಂತಾ ನಾನು ಬೇರೆ ಕ್ಷೇತ್ರಗಳಿಗೆ ಮೋಸ ಮಾಡಿಲ್ಲ. ಎಲ್ಲಾ ಕ್ಷೇತ್ರಗಳಿಗೂ ಅಭಿವೃದ್ಧಿ ಕೆಲಸಗಳನ್ನು ನೀಡಿದ್ದೇನೆ ಎಂದು ತಿಳಿಸಿದರು.ರಾಜಕೀಯ ಎಂಬುದು ನೀರಿನ ಮೇಲೆ ಇರುವ ಗುಳ್ಳೆ ಇದ್ದ ಹಾಗೆ, ಯಾವಾಗಲೂ ನಾವು ಪವರ್ ನಲ್ಲಿ ಇರುತ್ತೇವೆ ಅಂತಾ ಹೇಳುವುದಕ್ಕೆ ಆಗುವುದಿಲ್ಲ. ಪವರ್‍ನಲ್ಲಿ ಇರುವ ತನಕ ಕ್ಷೇತ್ರ ಹಾಗೂ ಜಿಲ್ಲೆಯನ್ನು ಅಭಿವೃದ್ಧಿಗೊಳಿಸಬೇಕು. ನಮ್ಮ ಮುಖ್ಯಮಂತ್ರಿಯಾಗಿ ಇನ್ನೂ ಎರಡು ವರ್ಷಗಳ ಕಾಲ ಯಡಿಯೂರಪ್ಪನವರೇ ಇರುತ್ತಾರೆ. ಹೀಗಾಗಿ ಮಂಡ್ಯ ಜಿಲ್ಲೆಯನ್ನು ಮತ್ತಷ್ಟು ಅಭಿವೃದ್ಧಿಗೊಳಿಸಬಹುದು.ಮುಂದುವರೆದು ಮಾತನಾಡಿದ ನಾರಾಯಣಗೌಡರು, ನಾನು ಮಂಡ್ಯ ಜಿಲ್ಲೆಯಲ್ಲಿ ಕೊಡುವುದು ತೆಗೆದುಕೊಳ್ಳುವುದು ಮಾಡಿದ್ದೇನೆ. ಬೇರೆ ಯಾರ ಬಳಿಯೂ ನಾನು ಯಾವ ವ್ಯವಹಾರವನ್ನು ಮಾಡಿಲ್ಲ. ನಾನು ಯಾರ ಬಳಿಯೂ ಡೀಲ್ ಮಾಡಿಲ್ಲ. ನಾನು ಸ್ವಚ್ಛವಾಗಿ ಇದ್ದೀನಿ. ಪುಟ್ಟರಾಜು ಅವರ ಬಳಿ ಆತ್ಮೀಯನಾಗಿ ಇದ್ದೀನಿ ಎಂದರು.Sign in to your account
Username or Email Address


Password

 Remember Me


